ಬ್ಯಾಂಕಿಂಗ್: ಪ್ರಗತಿ ವಿಶ್ಲೇಷಣೆಗೆ ಸೂಚನೆ

7

ಬ್ಯಾಂಕಿಂಗ್: ಪ್ರಗತಿ ವಿಶ್ಲೇಷಣೆಗೆ ಸೂಚನೆ

Published:
Updated:

ನವದೆಹಲಿ(ಪಿಟಿಐ): ಗ್ರಾಮೀಣ ಬ್ಯಾಂಕಿಂಗ್ ಶಾಖೆಗಳ ವಿಸ್ತರಣೆ ಮತ್ತು ಪ್ರಗತಿ ಯಾವ ಹಂತ ತಲುಪಿದೆ ಎನ್ನುವುದರ ಕುರಿತು ವಿಶ್ಲೇಷಣೆ ನಡೆಸುವಂತೆ ಕೇಂದ್ರ, ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳಿಗೆ (ಪಿಎಸ್‌ಬಿ) ಸೂಚನೆ ನೀಡಿದೆ.ಕೇಂದ್ರ ಸರ್ಕಾರದ 32ಕ್ಕೂ ಹೆಚ್ಚು ಯೋಜನೆಗಳ ಸಬ್ಸಿಡಿ ನೆರವನ್ನು ನೇರವಾಗಿ ಫಲಾನುಭವಿಗಳಿಗೆ ತಲುಪಿಸಲು ಗ್ರಾಮೀಣ ಪ್ರದೇಶದಲ್ಲಿ ಪ್ರತಿ ಕುಟುಂಬಕ್ಕೆ ಒಂದು ಬ್ಯಾಂಕ್ ಖಾತೆ ಅಗತ್ಯ ಇದೆ ಎಂದು `ಪಿಎಸ್‌ಬಿ~ಗಳು ಇತ್ತೀಚೆಗೆ ಹೇಳಿದ್ದವು. ಸರ್ಕಾರ ಕೂಡ ವಿತ್ತೀಯ ಸೇರ್ಪಡೆ ಯೋಜನೆಯಡಿ ಎರಡು ಸಾವಿರಕ್ಕಿಂತ ಹೆಚ್ಚು ಜನಸಂಖ್ಯೆ ಇರುವ 74 ಸಾವಿರ ಗ್ರಾಮಗಳಲ್ಲಿ ಬ್ಯಾಂಕ್ ಶಾಖೆ ತೆರೆಯುವಂತೆ `ಪಿಎಸ್‌ಬಿ~ಗಳಿಗೆ ಸೂಚನೆ ನೀಡಿತ್ತು.`ಪ್ರತಿ ತ್ರೈಮಾಸಿಕ ಅವಧಿಗೊಮ್ಮೆ ಗ್ರಾಮೀಣ ಬ್ಯಾಂಕಿಂಗ್ ವಲಯದ ಪ್ರಗತಿ ಕುರಿತು ವಿಶ್ಲೇಷಣೆ ನಡೆಸುವಂತೆ `ಪಿಎಸ್‌ಬಿ~ಗಳಿಗೆ ಸೂಚಿಸಿದ್ದೇವೆ. ಈಗಾಗಲೇ `ಸ್ವಾಭಿಮಾನ್ ಅಭಿಯಾನ~ದಡಿ ಗ್ರಾಮೀಣ ಪ್ರದೇಶದಲ್ಲಿ 3.25 ಕೋಟಿ ಬ್ಯಾಂಕ್ ಖಾತೆಗಳನ್ನು ತೆರೆಯಲಾಗಿದೆ~  ಎಂದು ಹಣಕಾಸು ಸಚಿವಾಲಯ ಹೇಳಿದೆ.2011ರ ಜನಗಣತಿ ಪ್ರಕಾರ ದೇಶದಲ್ಲಿ ಶೇ 58.7 ಕುಟುಂಬಗಳು ಬ್ಯಾಂಕಿಂಗ್ ಸೌಲಭ್ಯ ಪಡೆದುಕೊಂಡಿವೆ. ಬ್ಯಾಂಕಿಂಗ್ ಸೇವೆ ವಿಸ್ತರಿಸಲು ಆರ್‌ಬಿಐ ಇತ್ತೀಚೆಗೆ  `ಶೂನ್ಯ ಶಿಲ್ಕು~ ಖಾತೆ ಸೌಲಭ್ಯ ಒದಗಿಸುವಂತೆಯೂ ಬ್ಯಾಂಕುಗಳಿಗೆ ಸೂಚಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry