ಬ್ಯಾಂಕಿಂಗ್ ಸೇವೆ ಎಲ್ಲರಿಗೂ ತಲುಪಲಿ

7

ಬ್ಯಾಂಕಿಂಗ್ ಸೇವೆ ಎಲ್ಲರಿಗೂ ತಲುಪಲಿ

Published:
Updated:

ಮಡಿಕೇರಿ: ದೇಶದಲ್ಲಿ ಸೆಂಟ್ರಲ್ ಬ್ಯಾಂಕ್ ಮೂರನೇ ದೊಡ್ಡ ಬ್ಯಾಂಕ್ ಆಗಿದ್ದು. ಜಿಲ್ಲೆಯ ಜನರ ಆರ್ಥಿಕ ಮತ್ತು ವಾಣಿಜ್ಯ ಚಟುವಟಿಕೆಗಳಿಗೆ ಪೂರಕವಾಗಿ ಕಾರ್ಯನಿರ್ವಹಿಸುವಂತಾಗಲಿ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎನ್.ಕೃಷ್ಣಪ್ಪ ಅವರು ಆಶಿಸಿದರು.ನಗರದ ಕಂಚಿ ಕಾಮಾಕ್ಷಿ ದೇವಸ್ಥಾನ ಬಳಿ ನೂತನ ಸೆಂಟ್ರಲ್ ಬ್ಯಾಂಕ್ ಶಾಖೆ ಕಾರ್ಯರಂಭಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.ಜಿಲ್ಲೆಯಲ್ಲಿ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಮಡಿಕೇರಿಯ ಶಾಖೆಯು 2ನೇಯದಾಗಿದೆ. ಈಗಾಗಾಲೇ ಸುಂಟಿಕೊಪ್ಪದಲ್ಲಿ ಸೆಂಟ್ರಲ್ ಬ್ಯಾಂಕ್ ಶಾಖೆ ಉತ್ತಮ ಸೇವೆ ಸಲ್ಲಿಸುತ್ತಿದೆ ಎಂದು ಅವರು ತಿಳಿಸಿದರು.ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದ ಪ್ರಧಾನ ವ್ಯವಸ್ಥಾಪಕ ರವೀಂದ್ರನ್ ಅವರು ಮಾತನಾಡಿ, ಇಲ್ಲಿನ ನಾಗರಿಕರು, ರೈತರು, ವ್ಯಾಪಾರಿಗಳು ಮತ್ತಿತ್ತರು ಈ ಬ್ಯಾಂಕಿನ ಸೇವೆಯನ್ನು ಪಡೆಯಲಿ ಎಂದರು. 

ಲೀಡ್ ಬ್ಯಾಂಕ್ ವ್ಯವಸ್ಥಾಪಕ ಅರುಣಾಚಲ ಶರ್ಮ ಅವರು ಮಾತನಾಡಿ, ಸೆಂಟ್ರಲ್ ಬ್ಯಾಂಕ್, ಲೀಡ್ ಬ್ಯಾಂಕ್ ಕುಟುಂಬಕ್ಕೆ ಮತ್ತೊಂದು ಸೇರ್ಪಡೆಯಾಗಿದೆ ಎಂದು ತಿಳಿಸಿದರು.ನಬಾರ್ಡ್ ಎ.ಜಿ.ಎಂ.ಶಿವರಾಮಕೃಷ್ಣನ್ ಅವರು ಮಾತನಾಡಿ, ಗ್ರಾಮೀಣ ಜನರಿಗೆ ಕೃಷಿ, ವ್ಯಾಪಾರ ವಾಣಿಜ್ಯೋದ್ಯಮ ಮತ್ತಿತರ ಸೇವಾ ಸೌಲಭ್ಯಗಳನ್ನು ತಲುಪಿಸಲು ಅನುಕೂಲವಾಗಲಿದೆ ಎಂದರು.ಸೆಂಟ್ರಲ್ ಬ್ಯಾಂಕ್‌ನ ಉಪ ಮಹಾ ಪ್ರಬಂಧಕ ಬಾಲಕೃಷ್ಣ ಅವರು ಮಾತನಾಡಿ, ಸೆಂಟ್ರಲ್ ಬ್ಯಾಂಕ್ ಗ್ರಾಹಕರಿಗೆ, ವ್ಯಾಪಾರಸ್ಥರಿಗೆ ಸೌಲಭ್ಯ, ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಾಲ ಸೌಲಭ್ಯ ಮತ್ತಿತರ ಸೇವಾ ಸೌಲಭ್ಯ ನೀಡುತ್ತಾ ಬಂದಿದೆ ಎಂದರು.ನಗರಸಭೆ ಉಪಾಧ್ಯಕ್ಷೆ ವಸಂತ ಕೇಶವ, ನಗರಸಭೆ ಸದಸ್ಯರಾದ ಅರುಣ್, ಸತೀಶ ಪೈ, ಬ್ಯಾಂಕ್‌ನ ಸಿಬ್ಬಂದಿಗಳು, ಗ್ರಾಹಕರು ಮತ್ತಿತರರು ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry