ಮಂಗಳವಾರ, ಜನವರಿ 28, 2020
29 °C

ಬ್ಯಾಂಕಿನ ವ್ಯಾನಿನಿಂದ ರೂ.1.75 ಕೋಟಿ ಲೂಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಂಡಿಗಢ (ಐಎಎನ್ಎಸ್): ಖಾಸಗಿ ಬ್ಯಾಂಕಿನ ವ್ಯಾನ್ ತಡೆದ ರಿವಾಲ್ವರ್‌ ಹಿಡಿದುಕೊಂಡಿದ್ದ ನಾಲ್ವರು ಯುವಕರು, 1.75 ಕೋಟಿ ರೂಪಾಯಿಗಳಿಗೂ ಅಧಿಕ ಮೊತ್ತ ನಗದು ದೋಚಿದ ಘಟನೆ ಹರಿಯಾಣದ ಪಂಚಕುಲಾ ಜಿಲ್ಲೆಯಲ್ಲಿ ಸೋಮವಾರ ನಡೆದಿದೆ.

ಹರಿಯಾಣದಿಂದ 25ಕಿ.ಮೀ ದೂರದಲ್ಲಿರುವ ಪಂಚಕುಲಾ ಕಡೆಗೆ ಬರುತ್ತಿದ್ದ ವ್ಯಾನನ್ನು ಪಿಂಜೋರ್ ಬಳಿ ತಡೆದ ಶಸ್ತ್ರಾಸ್ತ್ರಧಾರಿ ಸಜ್ಜಿತ ಯುವಕರು, ನಗದು ದೋಚಿದ್ದಾರೆ ಎಂದು ಪೊಲೀಸ್‌ಅಧಿಕಾರಿಗಳು ತಿಳಿಸಿದ್ದಾರೆ.

‘ದುಷ್ಕರ್ಮಿಗಳನ್ನು ಶೀಘ್ರವೇ ಬಂಧಿಸಲಾಗುವುದು’ ಎಂದು ಪಂಚಕುಲಾದಲ್ಲಿ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪ್ರತಿಕ್ರಿಯಿಸಿ (+)