ಶುಕ್ರವಾರ, ಅಕ್ಟೋಬರ್ 18, 2019
28 °C

ಬ್ಯಾಂಕ್‌ಗಳಾಗಿ ಅಂಚೆ ಕಚೇರಿ: ಚಿಂತನೆ

Published:
Updated:

ನವದೆಹಲಿ (ಪಿಟಿಐ): ಗ್ರಾಮೀಣ ಪ್ರದೇಶದ ಜನತೆಗೆ ಬ್ಯಾಂಕಿಂಗ್ ಸೌಲಭ್ಯ ವಿಸ್ತರಿಸಲು ಹಳ್ಳಿ, ಹಳ್ಳಿಗಳಲ್ಲಿ ಇರುವ ಅಂಚೆ ಕಚೇರಿಗಳನ್ನು ಬ್ಯಾಂಕ್‌ಗಳಾಗಿ ಪರಿವರ್ತಿಸುವ ಆಲೋಚನೆಯನ್ನು ಈ ವರ್ಷ ಜಾರಿಗೆ ತರಲು ಸರ್ಕಾರ  ಉದ್ದೇಶಿಸಿದೆ.ಗ್ರಾಮೀಣ ಪ್ರದೇಶಗಳಲ್ಲಿ ಆರ್ಥಿಕ ಸೇರ್ಪಡೆ ಜಾರಿಗೆ ತರುವ ಸರ್ಕಾರದ ಗುರಿ ತಲುಪಲು ಅಂಚೆ ಕಚೇರಿಗಳ ಸಂಖ್ಯೆ ಹೆಚ್ಚಿಸುವ ಆಲೋಚನೆಯೂ ಸರ್ಕಾರಕ್ಕೆ ಇದೆ. ಈ ಯೋಜನೆ ಕಾರ್ಯಗತಗೊಂಡರೆ, ದೇಶದಲ್ಲಿ ಬ್ಯಾಂಕಿಂಗ್ ಸೌಲಭ್ಯವು ಮೂರು ಪಟ್ಟುಗಳಷ್ಟು ಹೆಚ್ಚಳವಾಗುವ ನಿರೀಕ್ಷೆ ಇದೆ.1.55 ಲಕ್ಷದಷ್ಟಿರುವ ಅಂಚೆ ಕಚೇರಿಗಳಲ್ಲಿ ಶೇ 90ರಷ್ಟು  ಗ್ರಾಮೀಣ ಪ್ರದೇಶಗಳಲ್ಲಿ ಇವೆ.

Post Comments (+)