ಬ್ಯಾಂಕ್‌ಗಳಿಂದ ಹೊಸ ಸಾಲ-ಗೃಹಸಾಲ ಬಡ್ಡಿ ಕಡಿತ

7

ಬ್ಯಾಂಕ್‌ಗಳಿಂದ ಹೊಸ ಸಾಲ-ಗೃಹಸಾಲ ಬಡ್ಡಿ ಕಡಿತ

Published:
Updated:

ಬೆಂಗಳೂರು: ಸಿಂಡಿಕೇಟ್ ಬ್ಯಾಂಕ್ ಗೃಹಸಾಲ ಬಡ್ಡಿದರ ತಗ್ಗಿಸಿದ್ದು, ರೂ 25 ಲಕ್ಷ ಸಾಲಕ್ಕೆ, 25 ವರ್ಷ ಅವಧಿಗೆ ಶೇ 10.50 ಬಡ್ಡಿ. ಮಾಸಿಕ ಕಂತು ರೂ 944ರಷ್ಟಿರಲಿದೆ ಎಂದು ಹೇಳಿದೆ.ರೂ 25 ಲಕ್ಷದಿಂದ 75 ಲಕ್ಷವರೆಗಿನ ಗೃಹಸಾಲಕ್ಕೆ ಶೇ 10.75 ಬಡ್ಡಿ. ರೂ 75 ಲಕ್ಷ ಮೀರಿದರೆ ಶೇ 10.90 ಬಡ್ಡಿ. ಕಾರು ಖರೀದಿಗೆ ಶೇ 95ರಷ್ಟು ಸಾಲ ಲಭ್ಯ. 84 ತಿಂಗಳ ಅವಧಿಗೆ ಶೇ 10.75ರ ಬಡ್ಡಿ. ಹಬ್ಬಗಳ ಈ ಸಂದರ್ಭದಲ್ಲಿ ಸಾಲ ಪ್ರಕ್ರಿಯೆ ಶುಲ್ಕ ಇರುವುದಿಲ್ಲ.ಕೆನರಾ ಬ್ಯಾಂಕ್ ಹೊಸ ಸಾಲ

ಕೆನರಾ ಬ್ಯಾಂಕ್ ಎಲ್‌ಇಡಿ ಫ್ಲಾಟ್ ಟಿವಿ, ಮೈಕ್ರೊವೇವ್ ಅವನ್, ಸೋಫಾ ಸೇರಿದಂತೆ ಗೃಹ ಬಳಕೆ ಸಾಮಗ್ರಿ ಖರೀದಿಗೆ ಸಾಲ ಯೋಜನೆ ಪ್ರಕಟಿಸಿದೆ. ಮಾಸಿಕ ಸಂಬಳದವರು, ಇಲ್ಲದವರೂ ಈ ಯೋಜನೆಯಡಿ ರೂ 1 ಲಕ್ಷದವರೆಗೂ ಸಾಲ ಪಡೆಯಬಹುದು. ಮರುಪಾವತಿ ಅವಧಿ ಗರಿಷ್ಠ 36 ತಿಂಗಳು. ಬಡ್ಡಿದರ ಶೇ 14.50. ಜ.31ರವರೆಗೆ ಪ್ರಕ್ರಿಯೆ ಶುಲ್ಕವಿಲ್ಲ. ಮುಂಚಿತ ಪಾವಗೂ ದಂಡವಿಲ್ಲ ಎಂದು ಬ್ಯಾಂಕ್ ಪ್ರಕಟಣೆ ತಿಳಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry