ಶನಿವಾರ, ಮೇ 15, 2021
24 °C

ಬ್ಯಾಂಕ್‌ಗಳಿಗೆ ನೆರವು: ಭರವಸೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ(ಪಿಟಿಐ):  ನಿಧಾನಗತಿಯ ಆರ್ಥಿಕ ಬೆಳವಣಿಗೆ ಹಿನ್ನೆಲೆಯಲ್ಲಿ ಸಂಕಷ್ಟಕ್ಕೀಡಾಗಿರುವ ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳಿಗೆ ಶಕ್ತಿ ತುಂಬಲು ಸರ್ಕಾರ, ಬಂಡವಾಳ ಒದಗಿಸಲು ಸೂಕ್ತ ಕ್ರಮ ಕೈಗೊಳ್ಳಲಿದೆ ಎಂದು ಕೇಂದ್ರ ಹಣಕಾಸು ಸಚಿವ ಪ್ರಣವ್ ಮುಖರ್ಜಿ ಹೇಳಿದ್ದಾರೆ.ಭಾರತೀಯ ಲೆಕ್ಕಪರಿಶೋಧಕರ ಸಂಸ್ಥೆ `ಐಸಿಎಐ~ ಮತ್ತು ಭಾರತೀಯ ವರ್ತಕರ ಸಂಸ್ಥೆ ನಗರದಲ್ಲಿ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, `ದೇಶದ ಒಟ್ಟು ಆಂತರಿಕ ಉತ್ಪನ್ನ (ಜಿಡಿಪಿ ಶೇ 6.9) ಬೆಳವಣಿಗೆ ಈಗಿರುವಂತೆ ನಿಧಾನಗತಿಯಲ್ಲಿಯೇ ಸಾಗಿದಲ್ಲಿ ಬ್ಯಾಂಕ್‌ಗಳ ಆಸ್ತಿ ಪ್ರಮಾಣದ ಮೇಲೆ ಖಂಡಿತ ಪ್ರತಿಕೂಲ ಪರಿಣಾಮ ಬೀರಲಿದೆ~ ಎಂದು ವಿಶ್ಲೇಷಿಸಿದರು.ಒಂದೊಮ್ಮೆ ಇಂಥ ಸಂಕಷ್ಟ ಎದುರಾದಲ್ಲಿ ಬ್ಯಾಂಕುಗಳು `ಬ್ಯಾಸೆಲ್-3~ ನಿಯಮಾವಳಿ ಪ್ರಕಾರ ಹೊಂದಿರಬೇಕಾದ ಬಂಡವಾಳ ಪ್ರಮಾಣ  ಸರಿದೂಗಿಸಲು  ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಲು ಬದ್ಧವಾಗಿದೆ ಎಂದು ಭರವಸೆ ನೀಡಿದರು.ಬ್ಯಾಂಕುಗಳ ವಹಿವಾಟು   ವೃದ್ಧಿಗೆ ನೆರವಾಗಲು 2010-11ರಲ್ಲಿ 20 ಸಾವಿರ ಕೋಟಿ ಮತ್ತು 2011-12ರಲ್ಲಿ 12 ಸಾವಿರ ಕೋಟಿ ರೂಪಾಯಿಗಳನ್ನು ಸರ್ಕಾರ ಭರ್ತಿ ಮಾಡಿತ್ತು. ಆ ಮೂಲಕ ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳಲ್ಲಿನ ಬಂಡವಾಳ ನಿಷ್ಪತ್ತಿ ಅನುಪಾತ (ಸಿಎಆರ್) ಶೇ 8ಕ್ಕಿಂತ ಹೆಚ್ಚು ಇರುವಂತೆ ನೋಡಿಕೊಂಡಿತ್ತು.ಅತ್ಯಧಿಕ ಬಡ್ಡಿದರ ಮತ್ತು ನಿಧಾನಗತಿಯ ಆರ್ಥಿಕ ಪ್ರಗತಿ ಕಾರಣದಿಂದಾಗಿಯೇ ಸಾಲ ಮರುಪಾವತಿ ಪ್ರಮಾಣ ಕುಸಿದಿದ್ದು, ಸರ್ಕಾರಿ ಬ್ಯಾಂಕುಗಳ ನಿವ್ವಳ ವಸೂಲಾಗದ ಮೊತ್ತವು 2011-12ರ ಹಣಕಾಸು ವರ್ಷದ ಮೊದಲ 9 ತಿಂಗಳಲ್ಲಿ 1.27 ಲಕ್ಷ ಕೋಟಿ ರೂಪಾಯಿಗಳಿಗೆ ಏರಿತ್ತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.