ಶುಕ್ರವಾರ, ಆಗಸ್ಟ್ 23, 2019
21 °C

ಬ್ಯಾಂಕ್ ಅಧಿಕಾರಿಗೆ ಒಂದು ವರ್ಷ ಸಜೆ

Published:
Updated:

ಬೆಂಗಳೂರು: ಅವ್ಯವಹಾರ ನಡೆಸಿ ಬ್ಯಾಂಕ್‌ಗೆ ನಷ್ಟ ಉಂಟುಮಾಡಿರುವ ಅಪರಾಧಕ್ಕಾಗಿ ಭಾರತೀಯ ಸ್ಟೇಟ್ ಬ್ಯಾಂಕ್‌ನ ಜಾಲಹಳ್ಳಿ ಶಾಖೆಯ ಹಿಂದಿನ ಕ್ಷೇತ್ರಾಧಿಕಾರಿ ಎಂ.ರವೀಂದ್ರನಾಥ್ ಅವರಿಗೆ ಸಿಬಿಐ ವಿಶೇಷ ನ್ಯಾಯಾಲಯ ಒಂದು ವರ್ಷ ಕಠಿಣ ಕಾರಾಗೃಹ ಶಿಕ್ಷೆ ಮತ್ತು 30 ಸಾವಿರ ರೂಪಾಯಿ ದಂಡ ವಿಧಿಸಿದೆ.ನಕಲಿ ಸಾಲ ವಿತರಣಾ ಪತ್ರಗಳನ್ನು ಸೃಷ್ಟಿಸಿ ಬ್ಯಾಂಕ್‌ಗೆ  ರೂ 2.30 ಲಕ್ಷ ನಷ್ಟ ಉಂಟುಮಾಡಿದ್ದ ಆರೋಪ ರವೀಂದ್ರನಾಥ್ ಮೇಲಿತ್ತು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಸಿಬಿಐ ಅಧಿಕಾರಿಗಳು, ತನಿಖೆ ನಡೆಸಿದ್ದರು. 1992ರಲ್ಲಿ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಲಾಗಿತ್ತು.1998ರಿಂದ ತಲೆ ಮರೆಸಿಕೊಂಡಿದ್ದ ರವೀಂದ್ರನಾಥ್ ಅವರನ್ನು ಸಿಬಿಐ ಪೊಲೀಸರು 14 ವರ್ಷಗಳ ಬಳಿಕ ಪತ್ತೆಮಾಡಿದ್ದರು. 2012ರ ಡಿಸೆಂಬರ್‌ನಿಂದ ಮತ್ತೆ ಪ್ರಕರಣದ ವಿಚಾರಣೆ ಆರಂಭವಾಗಿತ್ತು.

Post Comments (+)