ಬುಧವಾರ, ಮೇ 25, 2022
30 °C

ಬ್ಯಾಂಕ್ ಉದ್ಯೋಗಿಯ ಸಾಮಾಜಿಕ ಕಳಕಳಿ

ಸಿದ್ದಯ್ಯ ಹಿರೇಮಠ Updated:

ಅಕ್ಷರ ಗಾತ್ರ : | |

ಬ್ಯಾಂಕ್‌ನಲ್ಲಿ ಉದ್ಯೋಗ, ಕೈತುಂಬ ಸಂಬಳ, ಅಪ್ಪ, ಅಮ್ಮ, ಹೆಂಡತಿ, ಮಕ್ಕಳಿರುವ ತುಂಬು ಸಂಸಾರ. ಸ್ವರ್ಗಕ್ಕೆ ಕಿಚ್ಚು ಹಚ್ಚುವಂತಹ ಜೀವನ.ಇಂತಹ ಜೀವನ ಎದುರಿಸುತ್ತಿರುವ ಅನೇಕರು ಪರರ ಚಿಂತೆ ನಮಗೇಕಯ್ಯ ಎಂಬಂತೆ ಜೀವನ ನಡೆಸುತ್ತ ಸಮಾಜದ ಆಗುಹೋಗುಗಳ ಬಗ್ಗೆ ಚಿಂತೆಯನ್ನೇ ಮಾಡದಿರುವ ಉದಾಹರಣೆಗಳೇ ಅಧಿಕ. ಆದರೆ, ಇಂತಹ ಸ್ಥಿತಿಯಲ್ಲಿರುವ ವ್ಯಕ್ತಿಯೊಬ್ಬರು ಸಮಾಜ ಸೇವೆಗೆ ಆದ್ಯತೆ ನೀಡುತ್ತ, ನೊಂದವರ ಸಮಸ್ಯೆ ಗಳಿಗೆ ಮಿಡಿಯುತ್ತ ಬಡವರು, ನಿರು ದ್ಯೋಗಿಗಳಿಗಾಗಿ ಮಿಡಿಯುತ್ತಿದ್ದಾರೆ.ಬಳ್ಳಾರಿ ನಗರದ ಕೆನರಾ ಬ್ಯಾಂಕ್ ಪ್ರಧಾನ ಶಾಖೆಯಲ್ಲಿ ಗುಮಾಸ್ತ ಹುದ್ದೆ ಯಲ್ಲಿರುವ ಟಿ.ಎಸ್. ಸುರೇಶ ಕುಮಾರ್ ಅವರೇ ತಮ್ಮನ್ನು ಸಮಾಜ ಸೇವೆಗೆ ತೊಡಗಿಸಿಕೊಂಡಿದ್ದು, ನೊಂದ ವರ ಸಮಸ್ಯೆಗೆ ಸ್ಪಂದಿಸುವ ಕೆಲಸ ಮಾಡುತ್ತಿದ್ದಾರೆ.ಅನೇಕ ವರ್ಷಗಳಿಂದ ಜನರ ಸಮಸ್ಯೆ ಗಳಿಗೆ ಮಿಡಿಯುತ್ತಿರುವ ಸ್ಥಳೀಯ ಎಂಎಂಟಿಸಿ ಕಾಲೊನಿ ನಿವಾಸಿ ತಿಮ್ಮೋ ಪುರ ಸುಂಕಣ್ಣ ಅವರ ಪುತ್ರ ಸುರೇಶ ಕುಮಾರ್ ಸಮಾಜಸೇವೆ ಮಾಡು ವುದಕ್ಕೆಂದೇ 2010ರಲ್ಲಿ ಪ್ರಗತಿ ಸೇವಾ ಟ್ರಸ್ಟ್ ಸ್ಥಾಪಿಸಿದ್ದು, ಬಡ ವಿದ್ಯಾರ್ಥಿಗಳು ಹಾಗೂ ನೊಂದವರ ನೆರವಿಗೆ ಬರುವು ದಕ್ಕೆಂದೇ ತಮ್ಮ ಗೆಳೆಯರ ಗುಂಪು ಕಟ್ಟಿ ಕೊಂಡು ಸಮಸ್ಯೆ ಗಳಲ್ಲಿ ಇರುವವರಿಗೆ ಸಹಾಯ ನಿಡುತ್ತ ಜೀವನ ಸಾರ್ಥಕ ಮಾಡಿಕೊಳ್ಳುವತ್ತ ಸಾಗಿದ್ದಾರೆ.ನಗರದ ಮುನಿಸಿಪಲ್ ಪ್ರೌಢಶಾಲೆ ಹಾಗೂ ಕಾಲೇಜಿನಲ್ಲಿ ಪಿಯುಸಿ, ಸರಳಾ ದೇವಿ ಸರ್ಕಾರಿ ಪದವಿ ಕಾಲೇಜಿನಲ್ಲಿ ಬಿ.ಕಾಂ ಪದವಿ ಪೂರೈಸಿದ ನಂತರ 1998ರಲ್ಲಿ ಕೆನರಾ ಬ್ಯಾಂಕ್ ಉದ್ಯೋಗಿಯಾಗಿ ಸೇರಿದ್ದಾರೆ.ಸರ್ಕಾರಿ ಪಾಲಿಟೆಕ್ನಿಕ್ ನೆರವಿ ನೊಂದಿಗೆ ತಮ್ಮ ಟ್ರಸ್ಟ್‌ನಿಂದ ನಿರು ದ್ಯೋಗಿ ಯುವಕ/ ಯುವತಿಯ ರಿಗಾಗಿ ಉದ್ಯೋಗ ತರಬೇತಿ, ಕೌಶಲ ಅಭಿವೃದ್ಧಿ ತರಬೇತಿ ನೀಡುವ ಶಿಬಿರ ಆಯೋಜಿಸಿತ್ತ ಮೂರು ತಿಂಗಳು ಮತ್ತು ಆರು ತಿಂಗಳ ಅವಧಿಯಲ್ಲಿ ಹೊಲಿಗೆ, ಮೆಹಂದಿ, ಟಿವಿ, ಮೊಬೈಲ್ ದುರಸ್ತಿ ತರಬೇತಿ ಕೊಡಿ ಸುತ್ತ ಸ್ವಯಂ ಉದ್ಯೋಗ ಆರಂಭಿಸಲು ಅನುಕೂಲ ಕಲ್ಪಿಸುತ್ತಿ ದ್ದಾರೆ. ಅಷ್ಟೇ ಅಲ್ಲದೆ, ಎಸ್ಸೆಸ್ಸೆಲ್ಸಿ, ಪಿಯುಸಿ, ಪದವಿಯಲ್ಲಿ ಉತ್ತಮ ಅಂಕಗಳಿಸಿ ಯೂ ಮುಂದೆ ಓದಲಾಗದ ಒಬ್ಬಿಬ್ಬರು ಬಡ ವಿದ್ಯಾರ್ಥಿಗಳಿಗೆ ಪಠ್ಯ ಪುಸ್ತಕ, ನೋಟ್ ಪುಸ್ತಕ, ಪಾಠೋಪಕರಣ, ಪ್ರವೇಶ ಶುಲ್ಕ, ಹಾಸ್ಟೆಲ್ ಶುಲ್ಕ ನೀಡುತ್ತ ಓಡಾಡಲು ಬೈಸಿಕಲ್‌ಗಳನ್ನು ತಮ್ಮ ಸ್ವಂತದ ಆದಾಯದಲ್ಲೇ ಕೊಡಿ ಸುತ್ತ ಕಳಕಳಿ ವ್ಯಕ್ತಪಡಿಸುತ್ತಿದ್ದಾರೆ.'ದೇವರು ಎಲ್ಲರಿಗೂ ಸೇವೆಯ ಅವಕಾಶ ಕಲ್ಪಿಸುವುದಿಲ್ಲ. ಬಡತನದಲ್ಲಿ ಬಳಲುತ್ತಿರುವವರೂ ಚೆನ್ನಾಗಿ ಓದಿ ದುಡಿದು ತಮ್ಮ ಕಾಲ ಮೇಲೆ ನಿಂತು, ಸ್ವಾವಲಂಬಿಯಾಗಿ, ಇನ್ನೊಬ್ಬರಿಗೆ ಸಹಾಯ ಮಾಡುವಂತಾಗಲಿ ಎಂಬ ಉದ್ದೇಶದಿಂದಲೇ ಸ್ನೇಹಿತರ ನೆರವಿ ನೊಂದಿಗೆ ಪ್ರತಿ ವರ್ಷ ಒಬ್ಬಿಬ್ಬರಿಗೆ ಸಹಾಯ ಮಾಡಲೆಂದೇ ಟ್ರಸ್ಟ್ ಸ್ಥಾಪಿಸಿ ದ್ದೇನೆ. ಬೇಸಿಗೆಯ ವೇಳೆ ರಸ್ತೆಯ ಬದಿಯಲ್ಲಿ ಮಹಾನಗರ ಪಾಲಿಕೆಯ ಸಹಯೋಗದಲ್ಲಿ ಕುಡಿಯುವ ನೀರಿನ ಅರವಟಿಗೆ ಸ್ಥಾಪಿಸಿ ದಾಹದಿಂದ ಬಳಲು ವವರ ನೆರವಿಗೆ ಬರಲಾಗುತ್ತಿದೆ. ಸ್ನೇಹಿತ ರಾದ ನಾಗರಾಜ್, ಬಸವರಾಜ್, ಲೋಕೇಶ, ವೆಂಕಟೇಶ, ಸೂರ್ಯ ನಾರಾಯಣ, ಸುರೇಂದ್ರ, ಸುಂಕಣ್ಣ, ಭದ್ರ ಹಾಗೂ ಕೇದಾರನಾಥ ಅವರ ಯುವಪಡೆಯೊಂದಿಗೆ ಸಮಾಜದಲ್ಲಿ ನೊಂದವರಿಗೆ ಮಿಡಿಯುತ್ತ ಸಹಾಯಕ್ಕೆ ಧಾವಿಸಲಾಗುತ್ತಿದೆ' ಎಂದು ಸುರೇಶ ಕುಮಾರ್ ಹೆಮ್ಮೆಯಿಂದ ಹೇಳುತ್ತಾರೆ.ಪ್ರತಿಯೊಬ್ಬರೂ ಮಕ್ಕಳ ಜನ್ಮದಿನ ವನ್ನು ಅದ್ಧೂರಿಯಿಂದ ಆಚರಿಸುತ್ತ ಹಣ ಖರ್ಚು ಮಾಡಿದರೆ, ಇವರು ಮಾತ್ರ ತಮ್ಮ ಅವಳಿ ಮಕ್ಕಳ ಜನ್ಮದಿನ ವನ್ನು ವಿಶಿಷ್ಟವಾಗಿ ಆಚರಿಸುವ ಪದ್ಧತಿ ಅನುಸರಿಸುತ್ತಿದ್ದಾರೆ.ಬಡ ಮಹಿಳೆಯರಿಗೆ ಸೀರೆ ಮತ್ತಿತರ ಬಟ್ಟೆ ಕೊಡಿಸುತ್ತ, ಅನಾಥ, ಅಂಗವಿಕ ಲರಿಗೆ ಏನಾದರೂ ಅಗತ್ಯ ವಸ್ತುವನ್ನು ಉಡುಗೊರೆ ನೀಡುತ್ತ ಮಕ್ಕಳ ಜನ್ಮದಿನ  ಆಚರಿಸುವ ಇವರು ಹಿಂದುಳಿದ ಬಳ್ಳಾರಿ ತಾಲ್ಲೂಕಿನ ಯುವಕರಿಗೆ ಉಚಿತ ದರದಲ್ಲೇ ವೃತ್ತಿ ಶಿಕ್ಷಣ ದೊರಕಿಸುವ ನಿಟ್ಟಿನಲ್ಲಿ ಸ್ವಯಂ ಉದ್ಯೋಗ ಆರಂಭಿ ಸಲು ನೆರವಾಗುವ ನಿಟ್ಟಿನಲ್ಲಿ ವಿಶಿಷ್ಟ ರೀತಿಯ ವೃತ್ತಿ ಶಿಕ್ಷಣ ತರಬೇತಿ ಸಂಸ್ಥೆ ಆರಂಭಿಸುವ ಕನಸನ್ನು ಹೊಂದಿದ್ದಾಗಿ ತಿಳಿಸುತ್ತಾರೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.