ಮಂಗಳವಾರ, ಏಪ್ರಿಲ್ 13, 2021
26 °C

ಬ್ಯಾಂಕ್ ನೌಕರರ ಮುಷ್ಕರ ಅಂತ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಬ್ಯಾಂಕಿಂಗ್ ಕಾಯ್ದೆಗೆ ತಿದ್ದುಪಡಿ ಮತ್ತು ಪ್ರಮುಖ ಬ್ಯಾಂಕಿಂಗ್ ಸೇವೆಗಳನ್ನು ಹೊರತುಪಡಿಸಿ ಇತರ ಸೇವೆಗಳನ್ನು ಖಾಸಗಿಯವರಿಗೆ ಹೊರಗುತ್ತಿಗೆ ನೀಡುತ್ತಿರುವುದನ್ನು ವಿರೋಧಿಸಿ ಬ್ಯಾಂಕ್ ಕಾರ್ಮಿಕರ ಒಕ್ಕೂಟಗಳ ಸಂಯುಕ್ತ ವೇದಿಕೆ (ಯುಎಫ್‌ಬಿಯು) ಕರೆ ನೀಡಿರುವ ಮುಷ್ಕರ ಎರಡನೇ ದಿನವೂ ಮುಂದುವರಿದಿರುವ ಕಾರಣ ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳಲ್ಲಿ ಗುರುವಾರ ಸಹ ಯಾವುದೇ ರೀತಿಯ ಕೆಲಸ ನಡೆಯಲಿಲ್ಲ. ಇದರಿಂದಾಗಿ ವರ್ತಕರು ಮತ್ತು ಸಾರ್ವಜನಿಕರು ತೀವ್ರ ಸಮಸ್ಯೆ ಎದುರಿಸಿದರು.`ದೇಶದಾದ್ಯಂತ ಮುಷ್ಕರ ಯಶಸ್ವಿಯಾಗಿದೆ. ಬ್ಯಾಂಕುಗಳ ಸೇವೆ ಮೇಲೆ ಪರಿಣಾಮ ಉಂಟಾಗಿದೆ~ ಎಂದು ಅಖಿಲ ಭಾರತ ಬ್ಯಾಂಕ್ ನೌಕರರ ಸಂಘಟನೆ (ಎಐಬಿಇಎ) ಪ್ರಧಾನ ಕಾರ್ಯದರ್ಶಿ ಸಿ.ಎಚ್. ವೆಂಕಟಾಚಲಂ ತಿಳಿಸಿದ್ದಾರೆ.ಬ್ಯಾಂಕುಗಳು ಕಾರ್ಯನಿರ್ವಹಿಸದ ಕಾರಣ ಹಣಕಾಸಿನ ವ್ಯವಹಾರ, ಚೆಕ್ ವಿಲೇವಾರಿ, ವಿದೇಶಿ ವಿನಿಮಯ ಸೇವೆಗಳ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗಿತ್ತು. ಬ್ಯಾಂಕುಗಳು ಮುಂಚಿತವಾಗಿಯೇ ಎಟಿಎಂ ಯಂತ್ರಗಳಲ್ಲಿ ಹಣದ ವ್ಯವಸ್ಥೆ ಮಾಡಿದ್ದರಿಂದ ಜನ ಎಟಿಎಂಗಳನ್ನೇ  ಅವಲಂಬಿಸಿದ್ದರು.ದೇಶದಾದ್ಯಂತ ಸುಮಾರು 10 ಲಕ್ಷ ಬ್ಯಾಂಕ್ ಅಧಿಕಾರಿಗಳು ಮತ್ತು ನೌಕರರು ಬುಧವಾರದಿಂದ ಮುಷ್ಕರ ನಡೆಸುತ್ತಿದ್ದಾರೆ. 24 ಸರ್ಕಾರಿ ಸ್ವಾಮ್ಯದ ಮತ್ತು 12 ಖಾಸಗಿ ವಲಯದ ಬ್ಯಾಂಕುಗಳ ನೌಕರರು ಮುಷ್ಕರದಲ್ಲಿ ಪಾಲ್ಗೊಂಡಿದ್ದಾರೆ.ಬ್ಯಾಂಕಿಂಗ್ ಕಾಯ್ದೆಗೆ ತಿದ್ದುಪಡಿ ಮಾಡುವುದರಿಂದ ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳಲ್ಲಿ ಷೇರು ಹೊಂದಿರುವ ವಿದೇಶಿಯರಿಗೆ ಇರುವ ಮತದಾನದ ಹಕ್ಕಿನ ಮೇಲಿನ ನಿರ್ಬಂಧ ತೆರವಾಗುತ್ತದೆ ಮತ್ತು ಮತದಾನದ ಹಕ್ಕು ಹೆಚ್ಚಾಗುತ್ತದೆ. ಆದಕಾರಣ ಬ್ಯಾಂಕುಗಳ ನೌಕರರು ಇದನ್ನು ವಿರೋಧಿಸುತ್ತಿದ್ದಾರೆ.ಪಿಂಚಣಿ, ಗೃಹಸಾಲ ಪರಿಷ್ಕರಣೆ, ಕೆಲಸದ ಅವಧಿಯನ್ನು ಐದು ದಿನಗಳಿಗೆ ಸೀಮಿತಗೊಳಿಸುವುದು ಮತ್ತು ಮಾನವ ಸಂಪನ್ಮೂಲಕ್ಕೆ ಸಂಬಂಧಿಸಿದ ವಿವಾದಗಳನ್ನು ಬಗೆಹರಿಸುವುದು ಬ್ಯಾಂಕ್ ನೌಕರರ ಪ್ರಮುಖ ಬೇಡಿಕೆಗಳಾಗಿವೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.