ಬ್ಯಾಂಕ್ ಪರವಾನಗಿ: ಶೀಘ್ರದಲ್ಲೇ ಸಮಿತಿ

7

ಬ್ಯಾಂಕ್ ಪರವಾನಗಿ: ಶೀಘ್ರದಲ್ಲೇ ಸಮಿತಿ

Published:
Updated:

ನವದೆಹಲಿ (ಪಿಟಿಐ):ಹೊಸ ಬ್ಯಾಂಕ್ ಸ್ಥಾಪನೆಗೆ ಪರವಾನಗಿ ಕೋರಿ ಬಂದಿರುವ ಅರ್ಜಿಗಳನ್ನು ಅಂತಿಮಗೊಳಿಸಲು `ಆರ್‌ಬಿಐ' ಶೀಘ್ರದಲ್ಲೇ ಉನ್ನತ ಮಟ್ಟದ ಸಲಹಾ ಸಮಿತಿ (ಎಚ್‌ಎಲ್‌ಎಸಿ) ರಚಿಸಲಿದೆ.ಬ್ಯಾಂಕಿಂಗ್ ಮತ್ತು ಹಣಕಾಸು ವಲಯದ 5 ಜನ ತಜ್ಞರು ಈ ಸಮಿತಿಯಲ್ಲಿರಲಿದ್ದಾರೆ. `ಸೆಬಿ' ಅಧ್ಯಕ್ಷ ಯು.ಕೆ ಸಿನ್ಹಾ, ವಿಮೆ ನಿಯಂತ್ರಣ ಪ್ರಾಧಿಕಾರದ  ಅಧ್ಯಕ್ಷ ಟಿ.ಎಸ್. ವಿಜಯನ್,  ಪಿಂಚಣಿ ಪ್ರಾಧಿಕಾರದ ಅಧ್ಯಕ್ಷ ಯೋಗೇಶ್ ಅಗರ್‌ವಾಲ್, ಹಣಕಾಸು ಸೇವೆಗಳ ಕಾರ್ಯದರ್ಶಿ ರಾಜೀವ್ ಟಕ್ರು ಮತ್ತು ಹಣಕಾಸು ತಜ್ಞ ವೈ.ಎಚ್. ಮಲೇಗಾಂ ಸದಸ್ಯರಾಗಿ ನೇಮಕಗೊಳ್ಳುವ ಸಾಧ್ಯತೆ ಇದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry