ಬ್ಯಾಂಕ್ ಪಿಂಚಣಿದಾರರ ಸಮಾವೇಶ

ಗುರುವಾರ , ಜೂಲೈ 18, 2019
23 °C

ಬ್ಯಾಂಕ್ ಪಿಂಚಣಿದಾರರ ಸಮಾವೇಶ

Published:
Updated:

ಬೆಂಗಳೂರು: `ಅಖಿಲ ಭಾರತ ಬ್ಯಾಂಕ್ ಪಿಂಚಣಿದಾರರ ಸಮನ್ವಯ ಸಮಿತಿಯು ವಿವಿಧ ಬೇಡಿಗೆಗಳ ಕುರಿತು ಚರ್ಚಿಸಲು ರಾಷ್ಟ್ರೀಯ ಸಮಾವೇಶವನ್ನು ಸೋಮವಾರ (ಜೂನ್ 6) ರಂದು ನಗರದ ಪುರಭವನದಲ್ಲಿ ಹಮ್ಮಿಕೊಂಡಿದೆ~ ಎಂದು ಸಮಿತಿಯ ಅಧ್ಯಕ್ಷ  ಶಾಂತರಾಜು ತಿಳಿಸಿದರು.`ಸಮಾವೇಶದಲ್ಲಿ ದೇಶದ ಪ್ರಚಲಿತ ಆರ್ಥಿಕ ನೀತಿಗಳ ಬಗ್ಗೆ ಚರ್ಚಿಸಲಾಗುವುದು. ಬ್ಯಾಂಕಿಂಗ್ ಉದ್ಯಮದಲ್ಲಿ ಪಿಂಚಣಿದಾರರು ಹಲವು ಸಮಸ್ಯೆಗಳನ್ನು ಎದುರಿಸಬೇಕಾಗಿದೆ. ಪಿಂಚಣಿಯ ಹೆಚ್ಚಳ, ವೈದ್ಯಕೀಯ ಸೌಲಭ್ಯಗಳು ಈ ಬೇಡಿಕೆಗಳ ಕುರಿತು ಮುಖ್ಯವಾಗಿ ಸಮಾವೇಶದಲ್ಲಿ ಚರ್ಚಿಸಲಾಗುವುದು~ ಎಂದು ಹೇಳಿದರು.ಸಮಾವೇಶವನ್ನು ಅಖಿಲ ಭಾರತ ಬ್ಯಾಂಕ್ ಅಧಿಕಾರಗಳ ಮಹಾ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಸಂಗಾತಿ ಜಿ.ಡಿ.ನದಾಫ್ ಉದ್ಘಾಟಿಸಲಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry