`ಬ್ಯಾಂಕ್ ಯೋಜನೆ ಮಾಹಿತಿ ಗ್ರಾಹಕರಿಗೆ ತಿಳಿಸಿ'

ಬುಧವಾರ, ಜೂಲೈ 17, 2019
26 °C

`ಬ್ಯಾಂಕ್ ಯೋಜನೆ ಮಾಹಿತಿ ಗ್ರಾಹಕರಿಗೆ ತಿಳಿಸಿ'

Published:
Updated:

ಮುಳಬಾಗಲು: ಬ್ಯಾಂಕ್‌ಗಳಿಂದ ಹಲವು ನೂತನ ಯೋಜನೆಗಳು ಜಾರಿಗೆ ಬರುತ್ತಿದ್ದರೂ ಈ ಬಗ್ಗೆ ಗ್ರಾಹಕರಿಗೆ ಅರಿವಿಲ್ಲದೆ ಅದರ ಪ್ರಯೋಜನ ಸಿಗುತ್ತಿಲ್ಲ ಎಂದು ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಕೋಲಾರ ವಿಭಾಗದ ಸಹಾಯಕ ಪ್ರಧಾನ ವ್ಯವಸ್ಥಾಪಕ ವಾಸು ಕಳವಳ ವ್ಯಕ್ತಪಡಿಸಿದರು.ಸ್ಟೇಟ್ ಬ್ಯಾಂಕ್ ಮೈಸೂರು ವತಿಯಿಂದ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸೋಮವಾರ ನಡೆದ ಕೃಷಿ ಸಾಲಮೇಳದಲ್ಲಿ ಮಾತನಾಡಿದ ಅವರು, ಕಾಲಕಾಲಕ್ಕೆ ಬ್ಯಾಂಕ್ ಜಾರಿಗೆ ತರುವ ಎಲ್ಲ ಯೋಜನೆಗಳನ್ನು ಗ್ರಾಹಕರಿಗೆ ತಿಳಿಸಬೇಕು ಎಂದು ಸ್ಥಳೀಯ ಶಾಖೆಗಳಿಗೆ ಸೂಚಿಸುತ್ತೇನೆ ಎಂದರು.ರೈತರು ಕೃಷಿ ಸಾಲ ಸೌಲಭ್ಯಗಳನ್ನು ಪಡೆಯಲು ಆಸಕ್ತಿ ತೋರದಿರುವುದು ಅತಂಕಕಾರಿಯಾಗಿದೆ. ರೈತರಿಗೆ ಕೃಷಿ ಸಾಲದ ಯೋಜನೆಗಳು, ಅದರ ಪ್ರಯೋಜನಗಳನ್ನು ತಿಳಿಸುವ ಸಲುವಾಗಿ ಇಂತಹ ಮೇಳ ಏರ್ಪಡಿಸಲಾಗಿದೆ ಎಂದರು.ಬ್ಯಾಂಕ್‌ನ ಕೋಲಾರ ವಿಭಾಗದ ಮುಖ್ಯ ವ್ಯವಸ್ಥಾಪಕ ಅನಂದ್ ಸೆಲ್ವಂ ಮಾತನಾಡಿದರು. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಮಹಮದ್ ಇಲಿಯಾಜ್, ಗ್ರಾಹಕರ ಪರವಾಗಿ ಬಲ್ಲಾಂ ಜಿ.ರಾಮಕೃಷ್ಣಪ್ಪ, ನಾರಾಯಣರೆಡ್ಡಿ, ಶಂಕರ್‌ಸಿಂಗ್, ಗುಮ್ಮಳಾಪುರ ಅಮರನಾರಾಯಣ ಮುಂತಾದವರು ಮಾತನಾಡಿದರು.ಬ್ಯಾಂಕ್‌ನಲ್ಲಿ ಸಾಲ ಪಡೆದು ಸಕಾಲದಲ್ಲಿ ಮರುಪಾವತಿ ಮಾಡಿದ ಗ್ರಾಹಕರನ್ನು ಸನ್ಮಾನಿಸಲಾಯಿತು. ಬ್ಯಾಂಕ್‌ನ ಸ್ಥಳೀಯ ಶಾಖೆ ಟಿ.ಎಂ.ರವಿ, ಬಾಬು, ತೋಟಗಾರಿಕೆ ಇಲಾಖೆಯ ಸುಕನ್ಯಾ, ಯಶಸ್ವಿನಿ ಮತ್ತಿತರರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry