ಗುರುವಾರ , ಮೇ 13, 2021
18 °C

ಬ್ಯಾಂಕ್ ಸಂಪತ್ತು: ಭಾರತಕ್ಕೆ 3ನೇ ಸ್ಥಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ (ಪಿಟಿಐ): ದೇಶದ ಬ್ಯಾಂಕಿಂಗ್ ವಲಯದ ಒಟ್ಟು  ಸಂಪತ್ತು 2025ರ ವೇಳೆಗೆ ವಿಶ್ವದಲ್ಲಿಯೇ ಮೂರನೆಯ ಸ್ಥಾನಕ್ಕೆ ಏರಲಿದೆ ಎಂದು ಭಾರತೀಯ ವಾಣಿಜ್ಯೋದ್ಯಮ ಮಹಾಸಂಘಗಳ ಒಕ್ಕೂಟ (ಫಿಕ್ಕಿ) ಮತ್ತು ಜಾಗತಿಕ ಸಲಹಾ ಸಂಸ್ಥೆ ಬಿಸಿಜಿ ನಡೆಸಿದ ಜಂಟಿ ಸಮೀಕ್ಷೆ ತಿಳಿಸಿದೆ. ಸದ್ಯ ದೇಶದ ಬ್ಯಾಂಕಿಂಗ್ ಸಂಪತ್ತು 1,350 ಶತಕೋಟಿ ಡಾಲರ್‌ಗಳಷ್ಟಿದ್ದು,  (ರೂ60,75,000 ಕೋಟಿ) 2025ರ ವೇಳೆಗೆ ಇದು  28,500 ಶತಕೋಟಿ ಡಾಲರ್‌ಗಳಿಗೆ ಏರಿಕೆ ಕಾಣಲಿದೆ. ಈ ಅವಧಿಯಲ್ಲಿ ಚೀನಾದ ಬ್ಯಾಂಕಿಂಗ್ ಮೌಲ್ಯವು 1,15,000 ಶತಕೋಟಿ ಡಾಲರ್ ಮತ್ತು ಅಮೆರಿಕದ ಬ್ಯಾಂಕಿಂಗ್ ಸಂಪತ್ತು 1,00,000 ಶತಕೋಟಿ ಡಾಲರ್‌ಗಳಿಗೆ ಏರಿಕೆ ಕಾಣಲಿದ್ದು, ಮೊದಲೆರಡು ಸ್ಥಾನಗಳನ್ನು ಪಡೆಯಲಿವೆ.  ಇನ್ನು 5 ವರ್ಷಗಳಲ್ಲಿ ಚೀನಾ, ಪ್ರಪಂಚದ ಅತಿ ದೊಡ್ಡ ಬ್ಯಾಂಕಿಂಗ್ ಉದ್ಯಮ ಅಮೆರಿಕವನ್ನು ಹಿಂದಿಕ್ಕಲಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.