ಬ್ಯಾಂಕ್ ಸಾಲದ ವೈಖರಿ!
ಗೃಹ ಸಾಲ, ಗೋಲ್ಡ್ ಲೋನ್ ಮುಂತಾಗಿ ಸುಲಭ ಕಂತಿನ ಸಾಲ ನೀಡಲಾಗುವುದೆಂದು ಬ್ಯಾಂಕುಗಳ ಜಾಹೀರಾತುಗಳನ್ನು ನೀಡುತ್ತಿವೆ. ಈಗಿರುವ ಮನೆ ಮೇಲೆ ಪುಟ್ಟ ಮನೆ ಕಟ್ಟಿಸುವ ಆಸೆಯಿಂದ, ಬ್ಯಾಂಕ್ ಸಾಲಕ್ಕೆ ಪ್ರಯತ್ನಿಸಿದೆ. ನಿವೃತ್ತನಾದ್ದರಿಂದ, ಅವಕಾಶವಿಲ್ಲವೆಂದು ತಿಳಿಸಿದರು. ನನ್ನ ನಿವೃತ್ತಿ ವೇತನ, ಈಗಿರುವ ಸ್ವಂತ ಮನೆ ಅಥವಾ ಮಗನ ನಿವೇಶನವನ್ನು ಆಧಾರವಾಗಿಟ್ಟುಕೊಂಡೂ ಸಾಲ ನೀಡಲು ಅವಕಾಶವಿಲ್ಲವೆಂದು ತಿಳಿದು ಬಂತು. ಆದರೆ ಕಿಂಗ್ಫಿಷರ್ ವಿಮಾನ ಸಂಸ್ಥೆಗೆ ಎಸ್.ಬಿ.ಐ.ನಿಂದ ರೂ. 1400 ಕೋಟಿ, ಪಂಜಾಬ್ ನ್ಯಾಶನಲ್ ಬ್ಯಾಂಕಿನಿಂದ ರೂ. 700 ಕೋಟಿ, ಬ್ಯಾಂಕ್ ಆಫ್ ಬರೋಡದಿಂದ ರೂ. 500 ಕೋಟಿ ಹಾಗೂ ಐಸಿಐಸಿಐ ಬ್ಯಾಂಕಿನಿಂದ ರೂ. 450 ಕೋಟಿ ಸಾಲ ನೀಡಲಾಗಿದೆಯೆಂದು ಮಾಧ್ಯಮಗಳಿಂದ ತಿಳಿದು ಬಂದಿದೆ.
ಹೀಗೆಯೆ ಇನ್ನೆಷ್ಟು ಉದ್ಯಮಗಳಿಗೆ, ನಮ್ಮ ದೇಶದ ಬ್ಯಾಂಕುಗಳು `ಉದಾರವಾಗಿ~ ಸಾವಿರ ಸಾವಿರ ಕೋಟಿ ರೂ ನೀಡಿರಬಹುದು? ವರಮಾನ ತೆರಿಗೆ ಪಾವತಿಸುತ್ತಿರುವ ನನಗೆ ಪರಮಾವಧಿ ಹತ್ತು ಲಕ್ಷ ರೂಪಾಯಿ ಸಾಲ ದೊರೆಯಲಿಲ್ಲ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.