ಬ್ಯಾಂಕ್ ಸಿಬ್ಬಂದಿ ವಿರುದ್ಧ ಧರಣಿ

7

ಬ್ಯಾಂಕ್ ಸಿಬ್ಬಂದಿ ವಿರುದ್ಧ ಧರಣಿ

Published:
Updated:

ಮಾನ್ವಿ: ತಾಲ್ಲೂಕಿನ ಬಾಗಲವಾಡ ಗ್ರಾಮದ ಪ್ರಗತಿ ಗ್ರಾಮೀಣ ಬ್ಯಾಂಕ್ ಶಾಖೆಯ ವ್ಯವಸ್ಥಾಪಕ ಹಾಗೂ ಸಿಬ್ಬಂದಿಯ ಧೋರಣೆ ವಿರೋಧಿಸಿ ಶುಕ್ರವಾರ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಎನ್.ಮೂರ್ತಿ ಬಣ) ಕಾರ್ಯಕರ್ತರು ಹಾಗೂ ಸ್ತ್ರೀಶಕ್ತಿ ಗುಂಪುಗಳ ಸದಸ್ಯರು ಧರಣಿ ನಡೆಸಿದರು.ಬ್ಯಾಂಕಿನ ವ್ಯವಸ್ಥಾಪಕರು ತಮ್ಮ ಕಾರ್ಯನಿರ್ವಹಣೆಯಲ್ಲಿ ತಾರತಮ್ಯ ನೀತಿ ಅನುಸರಿಸುತ್ತಿದ್ದಾರೆ. ರೈತರು, ಕೂಲಿ ಕಾರ್ಮಿಕರು ಹಾಗೂ ಸ್ತ್ರೀಶಕ್ತಿ ಗುಂಪಿನ ಸದಸ್ಯರಿಗೆ ಸಾಲ ಸೌಲಭ್ಯ ನೀಡುವಲ್ಲಿ ಅಗತ್ಯ ದಾಖಲೆಗಳನ್ನು ಸಲ್ಲಿಸಿದರೂ ವಿನಾಕಾರಣ ಬ್ಯಾಂಕಿಗೆ ಅಲೆಯುವಂತೆ ಮಾಡುತ್ತಿದ್ದಾರೆ ಎಂದು ಧರಣಿ ನಿರತರು ಆರೋಪಿಸಿದರು.ವ್ಯವಸ್ಥಾಪಕರು ಹಾಗೂ ಸಿಬ್ಬಂದಿ ಯನ್ನು ಬೇರೆ ಕಡೆಗೆ ವರ್ಗಾ ಯಿಸಬೇಕು. ಈಗಾಗಲೇ ತಿರಸ್ಕರಿ ಸಿರುವ ರೈತರು, ಸ್ತ್ರೀಶಕ್ತಿ ಗುಂಪಿನ ಸದಸ್ಯರಿಗೆ ಸಾಲ ವಿತರಿಸಬೇಕು. ಅರ್ಹತೆಯುಳ್ಳ ಸಾಲಗಾರರಿಗೆ ತ್ವರಿತ ಗತಿಯಲ್ಲಿ ಸಾಲ ವಿತರಿಸಿಬೇಕು. ಗೋದಾಮು ಸಾಲ ಪಡೆದವರಿಗೆ ತಕ್ಷಣ ಸಹಾಯಧನ ವಿತರಣೆಗೆ ಕ್ರಮ ಕೈಗೊಳ್ಳಬೇಕು. ಎಸ್‌ಸಿ, ಎಸ್‌ಟಿ ಜನಾಂಗದವರಿಗೆ ಸರ್ಕಾರದಿಂದ ದೊರಕುವ ವಿವಿಧ ಬ್ಯಾಂಕ್ ಸೌಲ ಭ್ಯಗಳ ಬಗ್ಗೆ ಮಾಹಿತಿ ಪತ್ರಗಳನ್ನು ಬ್ಯಾಂಕಿನ ಸೂಚನಾ ಫಲಕದಲ್ಲಿ ಅಂಟಿಸುವುದು ಸೇರಿದಂತೆ ಪ್ರಗತಿ ಗ್ರಾಮೀಣ ಬ್ಯಾಂಕಿನ ವಿಭಾಗೀಯ ಪ್ರಬಂಧಕರಿಗೆ ಬರೆದ ವಿವಿಧ ಬೇಡಿಕೆಗಳ ಮನವಿ ಪತ್ರವನ್ನು ಸಲ್ಲಿಸಲಾಯಿತು.ದಸಂಸ ಹೋಬಳಿ ಅಧ್ಯಕ್ಷ ಬಸವರಾಜ ನಕ್ಕುಂದಿ, ಯಲ್ಲಪ್ಪ ಬಾಗಲವಾಡ, ನಾಗರಾಜ ಬಾಗಲ ವಾಡ, ಸಿದ್ದಪ್ಪ ಬ್ಯಾಗವಾಟ, ಹುಸೇ ನಪ್ಪ, ಗಂಗಪ್ಪ, ರಮೇಶ ಕರೇಗುಡ್ಡ, ವಿವಿಧ ಸ್ತ್ರೀಶಕ್ತಿ ಗುಂಪುಗಳ ಸದಸ್ಯರು ಧರಣಿಯಲ್ಲಿ ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry