`ಬ್ಯಾಂಕ್ ಸೌಲಭ್ಯ ಸದುಪಯೋಗ ಪಡೆಯಿರಿ'

ಭಾನುವಾರ, ಜೂಲೈ 21, 2019
21 °C

`ಬ್ಯಾಂಕ್ ಸೌಲಭ್ಯ ಸದುಪಯೋಗ ಪಡೆಯಿರಿ'

Published:
Updated:

ಬಳ್ಳಾರಿ: ಸ್ಥಳೀಯ ಪ್ರಗತಿ ಗ್ರಾಮೀಣ ಬ್ಯಾಂಕ್‌ನ ಗಾಂಧಿ ನಗರ ಶಾಖೆಯಲ್ಲಿ ಇತ್ತೀಚೆಗೆ ಗ್ರಾಹಕರ ಸಭೆ ಏರ್ಪಡಿಸಲಾಗಿತ್ತು. ಬ್ಯಾಂಕ್‌ನ ಅಧ್ಯಕ್ಷ ಎಂ.ಜಿ. ಭಟ್ ಮಾತನಾಡಿ, ಬ್ಯಾಂಕ್‌ನಲ್ಲಿರುವ ವಿವಿಧ ಠೇವಣಿಗಳು, ಅವುಗಳಿಗೆ ನೀಡುವ ಬಡ್ಡಿದರಗಳು ಹಾಗೂ ಮನೆ ಕಟ್ಟುವ ಸಾಲ, ವಾಹನ ಖರೀದಿಗೆ ಸಾಲ, ವೈಯಕ್ತಿಕ ಸಾಲ, ಉದ್ಯೋಗಸ್ಥರಿಗೆ ನೀಡುವ ಸಾಲ, ಶೈಕ್ಷಣಿಕ ಸಾಲ ಸೇರಿದಂತೆ ವಿವಿಧ ಸಾಲಗಳ ಹಾಗೂ ಯೋಜನೆಗಳ ಸೌಲಭ್ಯ ಇವೆ ಎಂದು ವಿವರಿಸಿದರು.ಬ್ಯಾಂಕ್‌ನ ಗ್ರಾಹಕರಿಗಾಗಿ ನೂತನವಾಗಿ ಎನ್‌ಇಎಫ್‌ಟಿ, ಆರ್‌ಟಿಜಿಎಸ್, ಎಟಿಎಂ ಡೆಬಿಟ್‌ಕಾರ್ಡ್, ಮೊಬೈಲ್ ಬ್ಯಾಂಕಿಂಗ್ ಮುಂತಾದ ನೂತನ ಮಾದರಿಯ ಇ- ತಂತ್ರಜ್ಞಾನದ ಸೌಲಭ್ಯ ಒದಗಿಸಲಾಗಿದೆ. ಗ್ರಾಹಕರು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ತಿಳಿಸಿದರು. ವಲಯಾಧಿಕಾರಿ ಕೆ.ಎಂ. ಹಿರೇಮಠ, ಮುಖ್ಯ ನಿಬಂಧಕ ವೈ. ಪರಮೇಶ್ವರಪ್ಪ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry