ಸೋಮವಾರ, ಆಗಸ್ಟ್ 3, 2020
23 °C

ಬ್ಯಾಟರಿ ಸ್ಪ್ರೇಯರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬ್ಯಾಟರಿ ಸ್ಪ್ರೇಯರ್

ವ್ಯವಸಾಯದಲ್ಲಿ ಸ್ಪ್ರೇಯರ್‌ಗಳ ಬಳಕೆ ಈಗ ಸರ್ವೇಸಾಮಾನ್ಯ. ತರಕಾರಿ, ತೋಟ, ಹೂ ತೋಟ, ಗದ್ದೆಗಳಲ್ಲಿ ಕೀಟ, ಸೋಂಕುಗಳ ಹತೋಟಿಗೆ ರಾಸಾಯನಿಕ ಅಥವಾ ನೈಸರ್ಗಿಕ ಔಷಧಗಳನ್ನು ಸಿಂಪಡಿಸಲು ಸ್ಪ್ರೇಯರ್ ಬೇಕೇಬೇಕು.ಒಂದು ಕೈಯಲ್ಲಿ ಪಂಪ್ ಮಾಡುತ್ತ ಸಿಂಪರಣೆ ಕೈಗೊಳ್ಳುವುದು ಸ್ವಲ್ಪ ಕಷ್ಟದ ಕೆಲಸ. ಅದನ್ನು ಸುಲಭಗೊಳಿಸಲು ಅಗ್ರಿಮೇಟ್, ಈಗ ಬ್ಯಾಟರಿ ಚಾಲಿತ ಸ್ಪ್ರೇಯರ್ ಪರಿಚಯಿಸಿದೆ. ಇದರಲ್ಲಿ ನಾಲ್ಕು ಮಾದರಿಗಳಿವೆ. ಇದರಲ್ಲಿ ಒಮ್ಮೆ 15 ಲೀಟರ್ ದ್ರಾವಣ ತುಂಬಬಹುದು. ಒಮ್ಮೆ ಚಾರ್ಜ್ ಮಾಡಿದರೆ 1-2 ಎಕರೆ ಭೂಮಿಗೆ ಸಿಂಪರಣೆ ಮಾಡಬಹುದು.ಇದರ ಬಳಕೆಯಿಂದ ಸಿಂಪರಣೆಯ ಕಾರ್ಯಕ್ಷಮತೆ ಹೆಚ್ಚುತ್ತದೆ, ಕಾರ್ಮಿಕ ಶಕ್ತಿ ಉಳಿತಾಯವಾಗುತ್ತದೆ. ಮುಖ್ಯವಾಗಿ ಇದು ಪೆಟ್ರೋಲ್ ಚಾಲಿತ ಯಂತ್ರವಲ್ಲ. ಕೈಯಿಂದ ಗಾಳಿ ಹಾಕುವ ಅಗತ್ಯ ಇಲ್ಲ. ಹೀಗಾಗಿ ಸಿಂಪರಣೆ ಮಾಡುವವರಿಗೆ ಆಯಾಸ ಆಗುವುದಿಲ್ಲ. ಮಹಿಳೆಯರು ಕೂಡಾ ಸುಲಭವಾಗಿ ಬಳಸಬಹುದಾಗಿದೆ.ಇದರ ಬಳಕೆ, ದೊರೆಯುವ ಸಹಾಯಧನ, ಉಚಿತ ಪ್ರಾತ್ಯಕ್ಷಿಕೆಗೆ 1800 425 7475 ಶುಲ್ಕ ರಹಿತ ಸಂಖ್ಯೆಗೆ ಕರೆ ಮಾಡಬಹುದು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.