ಬ್ಯಾಡಗಿ ಮೆಣಸಿನಕಾಯಿ ತಳಿ ಗುಣಮಟ್ಟ ಪ್ರಶಂಸೆ

7

ಬ್ಯಾಡಗಿ ಮೆಣಸಿನಕಾಯಿ ತಳಿ ಗುಣಮಟ್ಟ ಪ್ರಶಂಸೆ

Published:
Updated:

ಬ್ಯಾಡಗಿ: ಇಲ್ಲಿಯ ಮೆಣಸಿನಕಾಯಿ ಮಾರುಕಟ್ಟೆಗೆ ಸ್ವಿಟ್ಜರ್‌ಲೆಂಡ್‌ನ ಡಿವಿಜಿಯಾನ್ ಕಂಪನಿಯ ತ್ಯಾಂಗ್‌ರಾಬನ್ಸ್‌ನ ಹಾಗೂ ಪಾಪ್‌ಬುಷ್ ನೇತೃತ್ವದ ನಿಯೋಗ ಬುಧವಾರ ಭೇಟಿ ನೀಡಿ `ಬ್ಯಾಡಗಿ ಮೆಣಸಿನಕಾಯಿ~ ಗುಣಮಟ್ಟ ಕುರಿತು ಮೆಚ್ಚುಗೆ ವ್ಯಕ್ತಪಡಿಸಿತು.ಬ್ಯಾಡಗಿ ಮೆಣಸಿನಕಾಯಿ ಪ್ರಪಂಚದಲ್ಲಿಯೇ ಉತ್ಕೃಷ್ಟ ಹಾಗೂ ಉತ್ತಮ ಗುಣಮಟ್ಟ ಹೊಂದಿದೆ. ಈ ತಳಿಗೆ ನಮ್ಮ ದೇಶದಲ್ಲಿ ಹೆಚ್ಚು ಬೇಡಿಕೆ ಇರುವುದರಿಂದ ಕಳೆದ 26 ವರ್ಷಗಳಿಂದ ಈ ಮೆಣಸಿನಕಾಯಿಯನ್ನೇ ನಾವು ಓಲಿಯೋರೆಜಿನ್ ತಯಾರಿಕೆಗೆ ಬಳಸುತ್ತಿದ್ದೇವೆ. ಚೀನಾ ದೇಶದಲ್ಲಿ ಹೆಚ್ಚು ಬೆಳೆಯಲಾಗುತ್ತಿರುವ ಜೂಡೋ ಹೈಬ್ರಿಡ್ ತಳಿ ಬ್ಯಾಡಗಿ ಮೆಣಸಿನಕಾಯಿಗೆ ಸರಿ ಸಾಟಿಯಾಗಲಾರದು. ಈ ಹಿನ್ನೆಲೆಯಲ್ಲಿ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬ್ಯಾಡಗಿ ತಳಿ ಮೆಣಸಿನಕಾಯಿಗೆ ಹೆಚ್ಚು ಬೇಡಿಕೆ ಇರುವುದರಿಂದ ಅದರ ತಳಿ ಅಭಿವೃದ್ದಿ ಮಾಡಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.ಎಪಿಎಂಸಿ ಸದಸ್ಯ ಹಾಗೂ ಉದ್ಯಮಿ ಜಗದೀಶಗೌಡ ಪಾಟೀಲ ಮಾತನಾಡಿ ಇತ್ತೀಚಿನ ದಿನಗಳಲ್ಲಿ ಮಳೆಯಾಶ್ರಿತ ಮೆಣಸಿನಕಾಯಿ ಬೆಳೆ ಅತಿವೃಷ್ಟಿ ಹಾಗೂ ಅನಾವೃಷ್ಟಿಯಿಂದ ಸಾಕಷ್ಟು ಇಳುವರಿ ಬಾರದೆ ಹಾಗೂ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಸಿಗದೆ ಇರುವುದರಿಂದ ರೈತರು ಪರ್ಯಾಯ ಬೆಳೆಯ ಕಡೆಗೆ ಮುಖ ಮಾಡಿದ್ದಾರೆ.ಮೆಣಸಿನಕಾಯಿ ಬೆಳೆಯುವ ರೈತರಿಗೆ ರಿಯಾಯಿತಿ ಹಾಗೂ ಇತರೆ ಸೌಲಭ್ಯಗಳನ್ನು ಒದಗಿಸಿ ಉತ್ತೇಜಿಸುವುದು ಅಗತ್ಯವಾಗಿದೆ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry