ಬ್ಯಾಡ್ಮಿಂಟನ್‌ಗೆ ಉತ್ತಮ ಭವಿಷ್ಯವಿದೆ

ಮಂಗಳವಾರ, ಮೇ 21, 2019
23 °C

ಬ್ಯಾಡ್ಮಿಂಟನ್‌ಗೆ ಉತ್ತಮ ಭವಿಷ್ಯವಿದೆ

Published:
Updated:

ಹೈದರಾಬಾದ್ (ಪಿಟಿಐ): `ಲಂಡನ್ ಒಲಿಂಪಿಕ್ಸ್‌ನಲ್ಲಿ ಸೈನಾ ನೆಹ್ವಾಲ್ ಪದಕ ಜಯಿಸಿದ್ದು ಭಾರತದ ಇತರ ಬ್ಯಾಡ್ಮಿಂಟನ್ ಸ್ಪರ್ಧಿಗಳಲ್ಲಿ ತಾವೂ ಪದಕ ಗೆಲ್ಲಬಹುದು ಎನ್ನುವ ಭರವಸೆ ಮೂಡಿಸಿದೆ. ಈ ಕ್ರೀಡೆಗೆ ಉತ್ತಮ ಭವಿಷ್ಯವಿದೆ~ ಎಂದು ಭಾರತ ರಾಷ್ಟ್ರೀಯ ಬ್ಯಾಡ್ಮಿಂಟನ್ ತಂಡದ ಕೋಚ್ ಪುಲ್ಲೇಲ ಗೋಪಿಚಂದ್ ಅಭಿಪ್ರಾಯ ಪಟ್ಟಿದ್ದಾರೆ.

`ಬ್ಯಾಡ್ಮಿಂಟನ್‌ನಲ್ಲಿ ಇರುವವರು ಇನ್ನೂ ಯುವಕರು. ಆದ್ದರಿಂದ ಅವರು ಸಾಕಷ್ಟು ಸಾಧಿಸಬಲ್ಲ ಸಾಮರ್ಥ್ಯ ಹೊಂದಿದ್ದಾರೆ ಎಂದು ವಿಶ್ವಾಸದಿಂದ ಹೇಳಬಲ್ಲೆ. ಸೈನಾ, ಕಶ್ಯಪ್ ಕೂಡ ಈ ಸಲದ ಒಲಿಂಪಿಕ್ಸ್‌ನಲ್ಲಿ ಉತ್ತಮ ಭರವಸೆ ಮೂಡಿಸಿದ್ದಾರೆ~ ಎಂದು ಅವರು ನುಡಿದರು. ಕ್ಸಿನ್ ಬಗ್ಗೆ ಪ್ರತಿಕ್ರಿಯಿಸಿದರು. ಅವರು, ಕೇವಲ ಆ ಆಟಗಾರ್ತಿ ಮಾತ್ರವಲ್ಲ. ಆ ದೇಶದ ಪ್ರತಿಯೊಬ್ಬ ಆಟಗಾರ್ತಿಯರು ತಮ್ಮದೇ ಆದ ಶೈಲಿಯಲ್ಲಿ ಆಡುತ್ತಾರೆ. ಯಿಹಾನ್ ವಾಂಗ್ ಕೂಡಾ ಭಿನ್ನವಾದ ಶೈಲಿಯಲ್ಲಿ ಎದುರಾಳಿಗೆ ಉತ್ತರ ನೀಡುತ್ತಾರೆ. ತಮ್ಮದೇ ಶೈಲಿ ರೂಢಿಸಿಕೊಳ್ಳುವುದು ಪ್ರತಿಯೊಬ್ಬರಿಗೂ ಮುಖ್ಯ~ ಎಂದರು.

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry