ಬ್ಯಾಡ್ಮಿಂಟನ್‌: ಅಶ್ವಿನಿ- ಜ್ವಾಲಾಗೆ ಜಯ

7

ಬ್ಯಾಡ್ಮಿಂಟನ್‌: ಅಶ್ವಿನಿ- ಜ್ವಾಲಾಗೆ ಜಯ

Published:
Updated:

ಸೋಲ್‌ (ಪಿಟಿಐ): ಅಶ್ವಿನಿ ಪೊನ್ನಪ್ಪ ಮತ್ತು ಜ್ವಾಲಾ ಗುಟ್ಟಾ ಜೋಡಿ ಇಲ್ಲಿ ಆರಂಭವಾದ ಕೊರಿಯಾ ಓಪನ್‌ ಸೂಪರ್‌ ಸೀರಿಸ್‌ ಬ್ಯಾಡ್ಮಿಂಟನ್‌ ಟೂರ್ನಿಯ ಎರಡನೇ ಸುತ್ತು ಪ್ರವೇಶಿಸಿತು.



ಬುಧವಾರ ನಡೆದ ಮಹಿಳೆಯರ ಡಬಲ್ಸ್‌ ವಿಭಾಗದ ಮೊದಲ ಸುತ್ತಿನ ಪಂದ್ಯದಲ್ಲಿ ಭಾರತದ ಜೋಡಿ 21-10, 21-7 ರಲ್ಲಿ ನ್ಯೂಜಿಲೆಂಡ್‌ನ ಅನಾ ರಂಕಿನ್‌ ಮತ್ತು ಮೆಡಲಿನ್‌ ಸ್ಟಾಪ್ಲೆಟನ್‌ ವಿರುದ್ಧ ಜಯ ಸಾಧಿಸಿತು.



ಅಶ್ವಿನಿ ಮಿಶ್ರ ಡಬಲ್ಸ್‌ ವಿಭಾಗದಲ್ಲೂ ಶುಭಾರಂಭ ಮಾಡಿದರು. ಅಶ್ವಿನಿ ಮತ್ತು ತರುಣ್‌ ಕೋನ ಜೋಡಿ 22-20, 21-17 ರಲ್ಲಿ ಜರ್ಮನಿಯ ಜೊಹಾನೆಸ್‌ ಸ್ಕಾಟ್ಲೆರ್‌ ಮತ್ತು ಜೋಹಾನ ಗೊಲಿಸೆವ್‌ಸ್ಕಿ ಅವರನ್ನು ಮಣಿಸಿತು.



ಆದರೆ ಸಿಂಗಲ್ಸ್‌ ವಿಭಾಗದಲ್ಲಿ ಭಾರತ ನಿರಾಸೆ ಅನುಭವಿಸಿತು. ಕೆ. ಶ್ರೀಕಾಂತ್‌ ಪುರುಷರ ಸಿಂಗಲ್ಸ್‌ ವಿಭಾಗದ ಮೊದಲ ಪಂದ್ಯದಲ್ಲಿ 10-21, 11-21 ರಲ್ಲಿ ಜಪಾನ್‌ನ ಕೆನಿಚಿ ತಾಗೊ ಕೈಯಲ್ಲಿ ಪರಾಭವಗೊಂಡರು.



ಆರ್‌ಎಂವಿ ಗುರುಸಾಯಿದತ್‌ 11-21, 11-21 ರಲ್ಲಿ ಜಪಾನ್‌ನ ಇನ್ನೊಬ್ಬ ಆಟಗಾರ ತಕುಮಾ ಉಯೆದಾ ಎದುರು ಸೋಲು ಅನುಭವಿಸಿದರು.

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry