ಬ್ಯಾಡ್ಮಿಂಟನ್‌: ಅಶ್ವಿನಿ- ಜ್ವಾಲಾ ಜೋಡಿಗೆ ಸೋಲು

7

ಬ್ಯಾಡ್ಮಿಂಟನ್‌: ಅಶ್ವಿನಿ- ಜ್ವಾಲಾ ಜೋಡಿಗೆ ಸೋಲು

Published:
Updated:

ಸೋಲ್‌ (ಪಿಟಿಐ): ಅಶ್ವಿನಿ ಪೊನ್ನಪ್ಪ ಮತ್ತು ಜ್ವಾಲಾ ಗುಟ್ಟಾ ಜೋಡಿ ಇಲ್ಲಿ ನಡೆಯುತ್ತಿರುವ ಕೊರಿಯಾ ಓಪನ್‌ ಸೂಪರ್‌ ಸೀರಿಸ್‌ ಬ್ಯಾಡ್ಮಿಂಟನ್‌ ಟೂರ್ನಿಯ ಮೂರನೇ ಸುತ್ತಿನಲ್ಲಿ ಸೋಲು ಅನುಭವಿಸಿತು.ಗುರುವಾರ ನಡೆದ ಮಹಿಳೆಯರ ಡಬಲ್ಸ್‌ ವಿಭಾಗದ ಪಂದ್ಯದಲ್ಲಿ ಭಾರತದ ಆಟಗಾರ್ತಿಯರು 18-21, 12-21 ರಲ್ಲಿ ಕೊರಿಯಾದ ಯಿ ನಾ ಜಂಗ್‌ ಮತ್ತು ಸೊ ಯೂಂಗ್‌ ಕಿಮ್‌ ಕೈಯಲ್ಲಿ ಪರಾಭವಗೊಂಡರು.ಕರ್ನಾಟಕದ ಅಶ್ವಿನಿಗೆ ಮಿಶ್ರ ಡಬಲ್ಸ್‌ ವಿಭಾಗದಲ್ಲೂ ನಿರಾಸೆ ಎದುರಾಯಿತು. ಅಶ್ವಿನಿ ಮತ್ತು ತರುಣ್‌ ಕೋನ ಜೋಡಿ 10-21, 15-21 ರಲ್ಲಿ ಜರ್ಮನಿಯ ಮೈಕಲ್‌ ಫಶ್‌ ಮತ್ತು ಬಿರ್ಗಿಟ್‌ ಮಿಷೆಲ್ಸ್‌ ಕೈಯಲ್ಲಿ ಪರಾಭವಗೊಂಡಿತು. ಈ ಪಂದ್ಯ 31 ನಿಮಿಷಗಳಲ್ಲಿ ಕೊನೆಗೊಂಡಿತು.ಇದರೊಂದಿಗೆ ಟೂರ್ನಿಯಲ್ಲಿ ಭಾರತದ ಸವಾಲಿಗೆ ತೆರೆಬಿದ್ದಿದೆ. ಕೆ. ಶ್ರೀಕಾಂತ್‌ ಮತ್ತು ಆರ್‌ಎಂವಿ ಗುರುಸಾಯಿದತ್‌ ಮೊದಲ ಸುತ್ತಿನಲ್ಲೇ ಮುಗ್ಗರಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry