ಬ್ಯಾಡ್ಮಿಂಟನ್‌: ಆದಿತ್ಯಗೆ ಅಗ್ರ ಕ್ರಮಾಂಕ

7

ಬ್ಯಾಡ್ಮಿಂಟನ್‌: ಆದಿತ್ಯಗೆ ಅಗ್ರ ಕ್ರಮಾಂಕ

Published:
Updated:

ಮವ್‌, ಮಧ್ಯಪ್ರದೇಶ (ಪಿಟಿಐ): ಯುವ ಆಟಗಾರ ಆದಿತ್ಯ ಜೋಷಿ ವಿಶ್ವ ಬ್ಯಾಡ್ಮಿಂಟನ್‌ ಫೆಡರೇಷನ್‌ (ಡಬ್ಲ್ಯುಬಿಎಫ್‌) ಜೂನಿಯರ್‌ ವಿಭಾಗದ ರ್‍ಯಾಂಕಿಂಗ್‌ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ.ಈ ಮೂಲಕ ಜೂನಿಯರ್‌ ಬಾಲಕರ ವಿಭಾಗದಲ್ಲಿ ವಿಶ್ವದಲ್ಲಿ ಅಗ್ರ ರ್‍ಯಾಂಕ್‌ ಪಡೆದ ಭಾರತದ ಮೊದಲ ಆಟಗಾರ ಎಂಬ ಗೌರವ ತಮ್ಮದಾಗಿಸಿಕೊಂಡಿದ್ದಾರೆ.17ರ ಹರೆಯದ ಆದಿತ್ಯ ಹೋದ ನವೆಂಬರ್‌ ವೇಳೆಗೆ ರ್‍ಯಾಂಕಿಂಗ್‌ ಪಟ್ಟಿಯಲ್ಲಿ 11ನೇ ಸ್ಥಾನದಲ್ಲಿದ್ದರು. ಆ ಬಳಿಕ ಉತ್ತಮ ಪ್ರದರ್ಶನ ನೀಡಿದ್ದರಲ್ಲದೆ, ಒಟ್ಟು 18,776 ಪಾಯಿಂಟ್‌ ಕಲೆಹಾಕಿ ಅಗ್ರಸ್ಥಾನಕ್ಕೇರಿದ್ದಾರೆ.2013 ರಲ್ಲಿ ರಾಷ್ಟ್ರೀಯ ಚಾಂಪಿಯನ್‌ ಆಗಿದ್ದ ಆದಿತ್ಯ ಪುಣೆಯಲ್ಲಿ ನಡೆದಿದ್ದ ಅಂತರರಾಷ್ಟ್ರೀಯ ಟೂರ್ನಿಯಲ್ಲಿ ಚಿನ್ನದ ಪದಕ ಗೆದ್ದುಕೊಂಡಿದ್ದರು. ಹೋದ ತಿಂಗಳು ಚಂಡಿಗಡದಲ್ಲಿ ನಡೆದ ರಾಷ್ಟ್ರೀಯ ಜೂನಿಯರ್‌ ಚಾಂಪಿಯನ್‌ಷಿಪ್‌ನಲ್ಲಿ ಪ್ರಶಸ್ತಿ ಜಯಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry