ಬ್ಯಾಡ್ಮಿಂಟನ್‌: ಎರಡನೇ ಸುತ್ತಿಗೆ ಆನಂದ್‌ ಪವಾರ್‌

7

ಬ್ಯಾಡ್ಮಿಂಟನ್‌: ಎರಡನೇ ಸುತ್ತಿಗೆ ಆನಂದ್‌ ಪವಾರ್‌

Published:
Updated:

ಚಾಂಗ್‌ಜೌ, ಚೀನಾ (ಪಿಟಿಐ): ಭಾರತದ ಆನಂದ್‌ ಪವಾರ್‌ ಇಲ್ಲಿ ಆರಂಭವಾದ ಚೀನಾ ಮಾಸ್ಟರ್ಸ್‌ ಬ್ಯಾಡ್ಮಿಂಟನ್‌ ಟೂರ್ನಿಯ ಎರಡನೇ ಸುತ್ತು ಪ್ರವೇಶಿಸಿದರು.ಅವರು ಮೊದಲ ಸುತ್ತಿನಲ್ಲಿ ಅಗ್ರಶ್ರೇಯಾಂಕದ ಆಟಗಾರ ಚೀನಾದ ಚೆನ್‌ ಲಾಂಗ್‌ ವಿರುದ್ಧ ಪೈಪೋಟಿ ನಡೆಸಬೇಕಿತ್ತು. ಆದರೆ ಚೆನ್‌ ಹಿಂದೆ ಸರಿದ ಕಾರಣ ಆನಂದ್‌ಗೆ ‘ವಾಕ್‌ ಓವರ್‌’ ಲಭಿಸಿತು. ಎರಡನೇ ಸುತ್ತಿನಲ್ಲಿ ಅವರು ಜಪಾನ್‌ನ ಶೊ ಸಸಾಕಿ ವಿರುದ್ಧ ಆಡಲಿದ್ದಾರೆ.ಅಜಯ್‌ ಜಯರಾಮ್‌ ಗುರುವಾರ ನಡೆಯುವ ಮೊದಲ ಸುತ್ತಿನ ಪಂದ್ಯದಲ್ಲಿ ಚೀನಾದ ಚೆನ್‌ ಯುಕುನ್‌ ಅವರ ಸವಾಲನ್ನು ಎದುರಿಸುವರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry