ಬ್ಯಾಡ್ಮಿಂಟನ್‌: ಪ್ರಕಾಶ್‌, ಜಾಕ್ವೆಲಿನ್‌ಗೆ ಪ್ರಶಸ್ತಿ

7

ಬ್ಯಾಡ್ಮಿಂಟನ್‌: ಪ್ರಕಾಶ್‌, ಜಾಕ್ವೆಲಿನ್‌ಗೆ ಪ್ರಶಸ್ತಿ

Published:
Updated:

ಶಿವಮೊಗ್ಗ: ಪ್ರಕಾಶ್‌ ಜಾಲಿ ಮತ್ತು ಜಾಕ್ವೆಲಿನ್‌ ರೋಸ್‌ ಕುನ್ನತ್‌ ಇಲ್ಲಿ ನಡೆದ ರಾಜ್ಯ ಬ್ಯಾಡ್ಮಿಂಟನ್‌ ಚಾಂಪಿ­ಯನ್‌ಷಿಪ್‌ನಲ್ಲಿ ಕ್ರಮವಾಗಿ ಪುರುಷ ಹಾಗೂ ಮಹಿಳೆಯರ ವಿಭಾಗದಲ್ಲಿ ಪ್ರಶಸ್ತಿ ಗೆದ್ದುಕೊಂಡರು.ಗುರುವಾರ ನಡೆದ ಪುರುಷರ ಸಿಂಗಲ್ಸ್‌ ವಿಭಾಗದ ಫೈನಲ್‌ನಲ್ಲಿ ಆರನೇ ಶ್ರೇಯಾಂಕದ ಪ್ರಕಾಶ್‌ 18-21, 21-5, 21-17 ರಲ್ಲಿ ಮೂರನೇ ಶ್ರೇಯಾಂಕದ ಆಟಗಾರ ಅಭಿಷೇಕ್‌ ಯೆಲಿಗಾರ್‌ ಅವರನ್ನು ಮಣಿಸಿದರು. ಮೊದಲ ಗೇಮ್‌ನಲ್ಲಿ ಸೋಲು ಅನುಭವಿಸಿದ ಪ್ರಕಾಶ್‌ ಬಳಿಕ ತಿರುಗೇಟು ನೀಡುವಲ್ಲಿ ಯಶಸ್ವಿಯಾದರು.ಮಹಿಳೆಯರ ವಿಭಾಗದ ಫೈನಲ್‌ನಲ್ಲಿ ನಾಲ್ಕನೇ ಶ್ರೇಯಾಂಕದ ಜಾಕ್ವೆಲಿನ್‌ 21-9, 21-11 ರಲ್ಲಿ ಅರ್ಶೀನ್‌ ಸಯೀದಾ ಸಾದತ್‌ ವಿರುದ್ಧ ಸುಲಭ ಜಯ ದಾಖಲಿಸಿದರು.ಬಾಲಕರ 19 ವರ್ಷ ವಯಸ್ಸಿನೊಳ ಗಿನವರ ವಿಭಾಗದ ಫೈನಲ್‌ನಲ್ಲಿ ಡೇನಿಯಲ್‌ ಫರೀದ್‌ 23-21, 17-21, 21-18 ರಲ್ಲಿ ಅಗ್ರಶ್ರೇಯಾಂಕದ ಆಟಗಾರ ಹರ್ಷಿತ್‌ ಅಗರ್‌ವಾಲ್‌ ವಿರುದ್ಧ ಅಚ್ಚರಿಯ ಗೆಲುವು ಪಡೆದು ಪ್ರಶಸ್ತಿ ತಮ್ಮದಾಗಿಸಿಕೊಂಡರು.ಪುರುಷರ ಡಬಲ್ಸ್‌ ವಿಭಾಗದ ಫೈನಲ್‌ನಲ್ಲಿ ಡಿ. ಗುರುಪ್ರಸಾದ್‌- ವಿನೀತ್‌ ಮ್ಯಾನುಯೆಲ್‌ ಜೋಡಿ 19-21, 21-10, 21-8 ರಲ್ಲಿ ಎಸ್‌. ಆದರ್ಶ್‌ ಕುಮಾರ್‌- ವೆಂಕಟೇಶ್‌ ಪ್ರಸಾದ್‌ ಅವರನ್ನು ಮಣಿಸಿ ಚಾಂಪಿ ಯನ್‌ ಆಯಿತು. ಇಲ್ಲಿ ಅಗ್ರಶ್ರೇಯಾಂಕ ಹೊಂದಿದ್ದ ಆದರ್ಶ್‌- ವೆಂಕಟೇಶ್‌ ಮೊದಲ ಗೇಮ್‌ ಗೆದ್ದುಕೊಂಡಿದ್ದರೂ ಬಳಿಕ ಪಂದ್ಯದ ಮೇಲಿನ ಹಿಡಿತ ಕೈಬಿಟ್ಟರು.ಹಿರಿಯರ (+45) ಡಬಲ್ಸ್‌ ವಿಭಾಗದ ಫೈನಲ್‌ನಲ್ಲಿ ಜಯರಾಮ್‌ ಪೈ ಮತ್ತು ಎಂ. ಮಂಜುನಾಥ್‌ 21-14, 21-13 ರಲ್ಲಿ ಎ.ಟಿ. ಹರೀಶ್‌ ಹಾಗೂ ಕೆ. ರವಿ ವಿರುದ್ಧ ಗೆಲುವು ಪಡೆದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry