ಬ್ಯಾಡ್ಮಿಂಟನ್‌: ರೋಹಿತ್ ಶುಭಾರಂಭ

7

ಬ್ಯಾಡ್ಮಿಂಟನ್‌: ರೋಹಿತ್ ಶುಭಾರಂಭ

Published:
Updated:

ಶಿವಮೊಗ್ಗ: ಉತ್ತಮ ಆಟವಾಡಿದ ಎಂ. ರೋಹಿತ್‌ ಶಿವಮೊಗ್ಗ ಜಿಲ್ಲಾ ಬ್ಯಾಡ್ಮಿಂಟನ್‌ ಸಂಸ್ಥೆ  ಮತ್ತು ರಾಜ್ಯ ಬ್ಯಾಡ್ಮಿಂಟನ್‌ ಸಂಸ್ಥೆ ಸಹಯೋಗದಲ್ಲಿ ಇಲ್ಲಿ ಆರಂಭವಾದ ರಾಜ್ಯ ಬ್ಯಾಡ್ಮಿಂ­ಟನ್‌ ಟೂರ್ನಿಯ 13 ವರ್ಷ­ದೊ­ಳ­ಗಿನವರ ಬಾಲಕರ ವಿಭಾಗದ ಸಿಂಗ­ಲ್ಸ್‌ನಲ್ಲಿ ಶುಭಾರಂಭ ಮಾಡಿದರು. ಗುರುವಾರ ನಡೆದ ಮೊದಲ ಸುತ್ತಿನ ಪಂದ್ಯದಲ್ಲಿ ಮಂಡ್ಯದ ರೋಹಿತ್‌ 21–13, 21–14ರಲ್ಲಿ ಡಬ್ಲ್ಯುಪಿಬಿಎ ಕ್ಲಬ್‌ನ ವಿ. ಸುಹಾಸ್‌ ಎದುರು ಗೆಲುವು ಸಾಧಿಸಿದರು.ಇದೇ ವಿಭಾಗದ ಇನ್ನಷ್ಟು ಪಂದ್ಯಗಳಲ್ಲಿ ವಿ. ಕಾರ್ತಿಕ್‌ 21–12, 21–12ರಲ್ಲಿ ರಕ್ಷಿತ್‌ ರೆಡ್ಡಿ ಮೇಲೂ, ಚಿನ್ಮಯಿ ವೆಂಕಟೇಶ್‌ 21–5, 21–13ರಲ್ಲಿ ಸಿ.ಜಿ. ತೇಜಸ್‌ ವಿರುದ್ಧವೂ, ಆದಿತ್ಯ ಶೆಟ್ಟಿ 22–20, 14–21, 22––20ರಲ್ಲಿ ನರೇನ್‌ ಶಂಕರ್ ಅಯ್ಯರ್‌ ಮೇಲೂ, ಅಜಿಂಕ್ಯ ಜೋಶಿ 21––16, 21–13ರಲ್ಲಿ ಕೆ. ಗಣಪತಿ ವಿರುದ್ಧವೂ, ರಿಷಬ್‌ ರಾಜಮೋಹನ್‌ 24––22, 26–24ರಲ್ಲಿ ಎಚ್‌.ವಿ. ಸಂತೃಪ್ತ್‌ ಮೇಲೂ, ಶಶಾಂಕ್‌ ರೆಡ್ಡಿ 21–8, 21–10ರಲ್ಲಿ ನಿಗಮ್‌ ಜೈನ್‌ ವಿರುದ್ಧವೂ ಗೆಲುವು ಸಾಧಿಸಿ ಎರಡನೇ ಸುತ್ತಿಗೆ ಮುನ್ನಡೆದರು.ಡಬ್ಲ್ಯುಪಿಬಿಎ ಕ್ಲಬ್‌ನ ಸುಜಲ್‌ ಶೇಖರ್‌ 21–19, 22–20ರಲ್ಲಿ ಪಿಬಿಎ ಕ್ಲಬ್‌ನ ಕೆ. ಮಯೂರ್‌ ಮೇಲೆ ಜಯ ಪಡೆದರು. , ಮೈಸೂರಿನ ಎಸ್‌. ಭಾರ್ಗವ್‌ 21–6, 21–4ರಲ್ಲಿ ವಿಶೇಷ್‌ ಶರ್ಮ ಎದುರೂ ಜಯ ಗಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry