ಬುಧವಾರ, ಏಪ್ರಿಲ್ 21, 2021
31 °C

ಬ್ಯಾಡ್ಮಿಂಟನ್: ಅರವಿಂದ್, ಜಾಕ್ವೆಲಿನ್‌ಗೆ ಪ್ರಶಸ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಅಗ್ರ ಶ್ರೇಯಾಂಕದ ಅರವಿಂದ್ ಭಟ್ ಹಾಗೂ ಜಾಕ್ವೆಲಿನ್ ಕುನ್ನತ್ ಮಂಗಳವಾರ ಕೊನೆಗೊಂಡ ರಾಜ್ಯ ರ‌್ಯಾಂಕಿಂಗ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಕ್ರಮವಾಗಿ ಪುರುಷ ಹಾಗೂ ಮಹಿಳೆಯರ ವಿಭಾಗದಲ್ಲಿ ಚಾಂಪಿಯನ್ ಆದರು.ಮಲ್ಲೇಶ್ವರದಲ್ಲಿರುವ ಕೆನರಾ ಯೂನಿಯನ್‌ನಲ್ಲಿ ನಡೆದ ಫೈನಲ್‌ನಲ್ಲಿ ಅರವಿಂದ್ 21-8, 21-15ರಲ್ಲಿ ಆದರ್ಶ ಅವರನ್ನು ಪರಾಭವಗೊಳಿಸಿದರು. ಪುರುಷರ ಡಬಲ್ಸ್‌ನ ಅಂತಿಮ ಘಟ್ಟದ ಪಂದ್ಯದಲ್ಲಿ ಗುರುಪ್ರಸಾದ್-ವಿನೀತ್ ಮ್ಯಾನುಯೆಲ್ ಜೋಡಿ 21-14, 21-15ರಲ್ಲಿ ಅಭಿಜಿತ್-ಜಗದೀಶ್ ಯಾದವ್ ಅವರನ್ನು ಸೋಲಿಸಿತು.ಮಹಿಳೆಯರ ಸಿಂಗಲ್ಸ್ ಫೈನಲ್‌ನಲ್ಲಿ ಜಾಕ್ವೆಲಿನ್ 21-15, 21-17ರಲ್ಲಿ ಜಿ.ಎಂ.ನಿಶ್ಚಿತಾ ಅವರನ್ನು ಮಣಿಸಿದರು.

ಡಬಲ್ಸ್ ವಿಭಾಗದ ಅಂತಿಮ ಪಂದ್ಯದಲ್ಲಿ ಜಿ.ಎಂ.ನಿಶ್ಚಿತಾ-ವರ್ಷಾ ಬೆಳವಾಡಿ ಜೋಡಿ 17-21, 21-8, 21-19ರಲ್ಲಿ ಪೂರ್ವೀಷಾ-ಎಸ್.ಕೆ.ಸಾತ್ವಿಕ್ ಎದುರು ಗೆಲುವು ಸಾಧಿಸಿತು. ಮೊದಲ ಗೇಮ್‌ನಲ್ಲಿ ಸೋಲುಕಂಡರೂ ಧೃತಿಗೆಡದ ನಿಶ್ಚಿತಾ ಹಾಗೂ ವರ್ಷಾ ನಂತರದ ಎರಡು ಗೇಮ್ ತಮ್ಮದಾಗಿಸಿಕೊಂಡು ವಿಜಯಶಾಲಿಯಾದರು.ಮಿಶ್ರ ಡಬಲ್ಸ್ ಫೈನಲ್‌ನಲ್ಲಿ ಆದರ್ಶ-ನಿಶ್ಚಿತಾ 21-17, 21-14ರಲ್ಲಿ ಸಂಕೀರ್ತ್-ಪೂರ್ವೀಷಾ ಅವರನ್ನು ಪರಾಭವಗೊಳಿಸಿದರು. ಪುರುಷರ 45 ವರ್ಷ ಮೇಲಿನವರ ವಿಭಾಗದಲ್ಲಿ ನಾರಾಯಣ್ 21-15, 21-14ರಲ್ಲಿ ರವಿ ಎದುರು ಜಯ ಗಳಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.