ಬ್ಯಾಡ್ಮಿಂಟನ್: ಆನಂದ್ ಪವಾರ್‌ಗೆ ಸೋಲು

7

ಬ್ಯಾಡ್ಮಿಂಟನ್: ಆನಂದ್ ಪವಾರ್‌ಗೆ ಸೋಲು

Published:
Updated:

ಒಯೆನ್ಸ್, ಡೆನ್ಮಾರ್ಕ್ (ಪಿಟಿಐ): ಭಾರತದ ಆನಂದ್ ಪವಾರ್ ಇಲ್ಲಿ ನಡೆಯುತ್ತಿರುವ ಡೆನ್ಮಾರ್ಕ್ ಸೂಪರ್ ಸರಣಿ ಬ್ಯಾಡ್ಮಿಂಟನ್ ಟೂರ್ನಿಯ ಪುರುಷರ ವಿಭಾಗದ ಪ್ರಥಮ ಸುತ್ತಿನಲ್ಲಿಯೇ ಸೋಲು ಕಂಡಿದ್ದಾರೆ.ಬುಧವಾರ ನಡೆದ ಪಂದ್ಯದಲ್ಲಿಆನಂದ್ 21-14, 15-21, 11-21ರಲ್ಲಿ ಜಪಾನ್‌ನ ಶೊ ಸಸಾಕಿ ಎದುರು ಪರಾಭವಗೊಂಡರು. 54 ನಿಮಿಷ ನಡೆದ ಈ ಪಂದ್ಯದಲ್ಲಿ ಆನಂದ್ ಉತ್ತಮ ಆರಂಭವನ್ನೇ ಪಡೆದಿದ್ದರು. ಆದರೆ ಸ್ಥಿರ ಪ್ರದರ್ಶನ ತೋರುವಲ್ಲಿ ಯಶ ಕಾಣಲಿಲ್ಲ.ಅಶ್ವಿನಿ ಪರಾಭವ: ಇದೇ ಟೂರ್ನಿಯ ಮಿಶ್ರ ಡಬಲ್ಸ್ ವಿಭಾಗದ ಮೊದಲ ಸುತ್ತಿನ ಪಂದ್ಯದಲ್ಲಿ ಅಶ್ವಿನಿ ಪೊನ್ನಪ್ಪ ಹಾಗೂ ತರುಣ್ ಕೋನಾ ಸೋಲು ಕಂಡರು.ಅವರು 18-21, 15-21ರಲ್ಲಿ ಇಂಡೊನೇಷ್ಯಾದ ಮಾರ್ಕಿಸ್ ಕಿಡೊ ಹಾಗೂ ಪಿಯಾ ಜೆಬದಿಹಾ ಬರ್ನಡೆತ್ ಎದುರು ಪರಾಭವಗೊಂಡರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry