ಬ್ಯಾಡ್ಮಿಂಟನ್: ಕಶ್ಯಪ್ ಹೋರಾಟ ಅಂತ್ಯ
ಲಂಡನ್ (ಪಿಟಿಐ): ಪರುಪಳ್ಳಿ ಕಶ್ಯಪ್ ಅವರ ವೀರೋಚಿತ ಹೋರಾಟಕ್ಕೆ ತೆರೆ ಬಿದ್ದಿದೆ. ಪುರುಷರ ಬ್ಯಾಡ್ಮಿಂಟನ್ ಸಿಂಗಲ್ಸ್ನ ಕ್ವಾರ್ಟರ್ ಫೈನಲ್ ತಲುಪಿ ಅಚ್ಚರಿ ಮೂಡಿಸಿದ ಅವರು ಲಂಡನ್ ಒಲಿಂಪಿಕ್ಸ್ನಿಂದ ಹೊರಬಿದ್ದಿದ್ದಾರೆ.
ವೆಂಬ್ಲೆ ಅರೆನಾ ಕೋರ್ಟ್ನಲ್ಲಿ ಗುರುವಾರ ನಡೆದ ಎಂಟರ ಘಟ್ಟದ ಪಂದ್ಯದಲ್ಲಿ ಕಶ್ಯಪ್ 19-21, 11-21ರಲ್ಲಿ ಮಲೇಷ್ಯಾದ ಲೀ ಚೊಂಗ್ ವೆಯ್ ಎದುರು ಪರಾಭವಗೊಂಡರು. ಬೀಜಿಂಗ್ ಒಲಿಂಪಿಕ್ಸ್ನಲ್ಲಿ ಬೆಳ್ಳಿ ಪದಕ ಜಯಿಸಿದ್ದ ವಿಶ್ವ ಎರಡನೇ ರ್ಯಾಂಕ್ನ ಆಟಗಾರ ಚೊಂಗ್ಗೆ ಮೊದಲ ಗೇಮ್ನಲ್ಲಿ ಕಶ್ಯಪ್ ಬೆವರಿಳಿಸಿದರು.
ಆದರೆ ಎರಡನೇ ಗೇಮ್ನಲ್ಲಿ ಸುಲಭವಾಗಿ ಕೈಚೆಲ್ಲಿದರು. ಈ ಒಲಿಂಪಿಕ್ಸ್ನಲ್ಲಿ ಗಮನಾರ್ಹ ಪ್ರದರ್ಶನ ತೋರಿದ ಕಶ್ಯಪ್ ಈ ಸಾಧನೆ ಮಾಡಿದ ಭಾರತದ ಮೊದಲ ಬ್ಯಾಡ್ಮಿಂಟನ್ ಆಟಗಾರ ಎನಿಸಿದ್ದು ವಿಶೇಷ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.