ಬ್ಯಾಡ್ಮಿಂಟನ್: ಕ್ವಾರ್ಟರ್ ಫೈನಲ್‌ಗೆ ಕಶ್ಯಪ್, ಅದಿತಿ

7

ಬ್ಯಾಡ್ಮಿಂಟನ್: ಕ್ವಾರ್ಟರ್ ಫೈನಲ್‌ಗೆ ಕಶ್ಯಪ್, ಅದಿತಿ

Published:
Updated:

ನವದೆಹಲಿ (ಪಿಟಿಐ): ಪಿ. ಕಶ್ಯಪ್ ಮತ್ತು ಅದಿತಿ ಮುಟತ್ಕರ್ ವಿಯೆನ್ನಾದಲ್ಲಿ ನಡೆಯುತ್ತಿರುವ ಆಸ್ಟ್ರಿಯನ್ ಇಂಟರ್‌ನ್ಯಾಷನಲ್ ಚಾಲೆಂಜ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಕ್ರಮವಾಗಿ ಪುರುಷರ ಹಾಗೂ ಮಹಿಳೆಯರ ವಿಭಾಗದ ಕ್ವಾರ್ಟರ್ ಫೈನಲ್ ಪ್ರವೇಶಿಸಿದರು.ಶುಕ್ರವಾರ ನಡೆದ ಪುರುಷರ ವಿಭಾಗದ ಪಂದ್ಯದಲ್ಲಿ ಭಾರತದ ಆಟಗಾರ 21-18, 21-12 ರಲ್ಲಿ ಡೆನ್ಮಾರ್ಕ್‌ನ ಎಮಿಲ್   ಹಾಸ್ಟ್ ಎದುರು ಗೆದ್ದರು. ಅದಿತಿ 22-20, 22-20 ರಲ್ಲಿ ಬೆಲಾರಸ್‌ನ ಅಲೇಸಿಯಾ ಜೆಟ್ಸಾವ ಅವರನ್ನು ಮಣಿಸಿದರು.ಮಹಿಳೆಯರ ವಿಭಾಗದಲ್ಲಿ ಕಣದಲ್ಲಿದ್ದ ಭಾರತದ ಇತರ ಸ್ಪರ್ಧಿಗಳಾದ ನೇಹಾ ಪಂಡಿತ್ ಮತ್ತು ಪಿ.ಸಿ. ತುಳಸಿ ಎರಡನೇ ಸುತ್ತಿನಲ್ಲಿ ಸೋಲು ಅನುಭವಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry