ಬ್ಯಾಡ್ಮಿಂಟನ್: ನೈರುತ್ಯ-ಉತ್ತರ ರೈಲ್ವೆಗೆ ಪ್ರಶಸ್ತಿ

7

ಬ್ಯಾಡ್ಮಿಂಟನ್: ನೈರುತ್ಯ-ಉತ್ತರ ರೈಲ್ವೆಗೆ ಪ್ರಶಸ್ತಿ

Published:
Updated:
ಬ್ಯಾಡ್ಮಿಂಟನ್: ನೈರುತ್ಯ-ಉತ್ತರ ರೈಲ್ವೆಗೆ ಪ್ರಶಸ್ತಿ

ಧಾರವಾಡ: ಹಾಲಿ ಚಾಂಪಿಯನ್ ನೈರುತ್ಯ ರೈಲ್ವೆ ಹಾಗೂ ಉತ್ತರ ರೈಲ್ವೆ ತಂಡಗಳು ಇಲ್ಲಿಯ ಜಿಲ್ಲಾ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದಿರುವ 59ನೇ ಅಖಿಲ ಭಾರತ ರೈಲ್ವೆ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಕ್ರಮವಾಗಿ ಪುರುಷರ ಹಾಗೂ ಮಹಿಳಾ ವಿಭಾಗದ ಪ್ರಶಸ್ತಿಯನ್ನು ಗೆದ್ದುಕೊಂಡವು.ಸೋಮವಾರ ಮಧ್ಯರಾತ್ರಿವರೆಗೆ ನಡೆದ ಫೈನಲ್ ಹಣಾಹಣಿಯಲ್ಲಿ ಆತಿಥೇಯ ನೈರುತ್ಯ ರೈಲ್ವೆ ತಂಡ 3-2ರ ಅಂತರದಿಂದ ಕಳೆದ ಸಲದ ರನ್ನರ್ ಅಪ್ ದಕ್ಷಿಣ ಮಧ್ಯ ರೈಲ್ವೆ ತಂಡವನ್ನು ಪರಾಭವಗೊಳಿಸಿ ಪ್ರಶಸ್ತಿ ಮೇಲೆ ಹಿಡಿತ ಸಾಧಿಸಿತು.ಬಲಶಾಲಿ ಹೊಡೆತಗಳ ಮೂಲಕ ಗಮನಸೆಳೆದ ದಕ್ಷಿಣ ಮಧ್ಯ ರೈಲ್ವೆಯ ಪಿ.ವಿನಯಕುಮಾರ್ ರೆಡ್ಡಿ 21-14, 21-11ರಿಂದ ಅಗ್ರ ಶ್ರೇಯಾಂಕಿತ ಮೊಹೀತ್ ಕಾಮತ್ ಅವರನ್ನು   ಸೋಲಿಸಿ ನೈರುತ್ಯ ರೈಲ್ವೆಗೆ ಆರಂಭದಲ್ಲೇ ಆಘಾತ ನೀಡಿದರು.ರಕ್ಷಣಾತ್ಮಕ ಆಟಕ್ಕೆ ಹೆಚ್ಚು ಒತ್ತು ನೀಡಿದ ಕಾಮತ್ ಅದಕ್ಕೆ ತಕ್ಕ ಬೆಲೆಯನ್ನು ತೆರಬೇಕಾಯಿತು. ಹಲವು ಸಲ ಕಾಮತ್ ಅವರನ್ನು ಬೇಸ್‌ಲೈನ್ ಕಡೆಗೆ ಓಡಾಡಿಸಿದ ರೆಡ್ಡಿ, ಬಲಶಾಲಿ ಸ್ಮ್ಯಾಶ್‌ಗಳ ಮೂಲಕ ಎದುರಾಳಿಯನ್ನು ಕಂಗೆಡಿಸಿದರು.ಎರಡನೇ ಸಿಂಗಲ್ಸ್‌ನಲ್ಲಿ ನೈರುತ್ಯ ರೈಲ್ವೆಯ ಜಗದೀಶ ಯಾದವ್ 21-18, 21-18ರಿಂದ ದಕ್ಷಿಣ ಮಧ್ಯ ರೈಲ್ವೆಯ ಸಿ.ಎಂ. ಶಶಿಧರ ಅವರ ವಿರುದ್ಧ ಜಯ ಸಾಧಿಸುವ ಮೂಲಕ ಪಂದ್ಯವನ್ನು 1-1ರ ಸಮಸ್ಥಿತಿಗೆ ತಂದರು.ನಂತರ ನಡೆದ ಡಬಲ್ಸ್‌ನಲ್ಲಿ ನೈರುತ್ಯ ರೈಲ್ವೆಯ ಅನಿಲಕುಮಾರ್ ರಾಜು ಮತ್ತು ಕೆ.ಎಸ್. ಹೆರ್ಸನ್ ಜೋಡಿ 18-21, 20-22, 22-20ರಿಂದ ದಕ್ಷಿಣ ಮಧ್ಯ ರೈಲ್ವೆಯ ಜಯನ್ ಜೇಮ್ಸ ಮತ್ತು ಟಿ. ದಿನೇಶ ಜೋಡಿ ಎದುರು ಜಯ ಸಾಧಿಸಿತು. ಈ ಹಂತದಲ್ಲಿ ನೈರುತ್ಯ ರೈಲ್ವೆ 2-1ರಿಂದ ಮುನ್ನಡೆ ಪಡೆಯಿತು.ಮೂರನೇ ಸಿಂಗಲ್ಸ್‌ನಲ್ಲಿ ಬಿ.ಕಿರಣಕುಮಾರ್ 21-16, 18-21, 21-17ರಿಂದ ಎಸ್. ಸಂಜೀತ್ ಅವರನ್ನು ಸೋಲಿಸಿ, ಫೈನಲ್‌ಗೆ ರೋಚಕ ತಿರುವು ನೀಡಿದರು. ಆಗ ಪಂದ್ಯ 2-2ರಿಂದ ಸಮವಾಯಿತು. ಆದರೆ, ಇದರಿಂದ ವಿಚಲಿತವಾಗದ ಮೊಹೀತ್ ಕಾಮತ್ ಮತ್ತು ಜಗದೀಶ ಯಾದವ್ ಜೋಡಿ 22-20, 21-17ರಿಂದ ಕಿರಣಕುಮಾರ್ ಮತ್ತು ವಿನಕುಮಾರ್ ರೆಡ್ಡಿ ಜೋಡಿಯನ್ನು ಪರಾಭವಗೊಳಿಸುವ ಮೂಲಕ ತಂಡಕ್ಕೆ ಪ್ರಶಸ್ತಿ ಕೊಡಿಸುವಲ್ಲಿ ಯಶಸ್ವಿಯಾದರು.ಮಹಿಳೆಯರ ವಿಭಾಗದಲ್ಲಿ ಅಗ್ರ ಶ್ರೇಯಾಂಕದ ಆಟಗಾರ್ತಿ ಅನಿತಾ ಓಹ್ಲಾನ್ ಅವರ ಅದ್ಭುತ ಪ್ರದರ್ಶನದ ನೆರವಿನಿಂದ ಉತ್ತರ ರೈಲ್ವೆ ತಂಡ 2-1ರ ಅಂತರದಿಂದ ಕಳೆದ ಸಲದ ರನ್ನರ್ ಅಪ್ ಸೆಂಟ್ರಲ್ ರೈಲ್ವೆ ತಂಡದ ವಿರುದ್ಧ ಜಯ ಸಾಧಿಸಿತು. ಸಿಂಗಲ್ಸ್ ಮತ್ತು ಡಬಲ್ಸ್ ಎರಡರಲ್ಲೂ ಜಯ ಸಾಧಿಸಿದ ಅನಿತಾ, ಉತ್ತರ ರೈಲ್ವೆ ಚಾಂಪಿಯನ್ ಆಗುವಲ್ಲಿ ಮಹತ್ವದ ಪಾತ್ರ ನಿರ್ವಹಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry