ಬುಧವಾರ, ಮೇ 12, 2021
18 °C

ಬ್ಯಾಡ್ಮಿಂಟನ್: ಪ್ರಧಾನ ಸುತ್ತು ಪ್ರವೇಶಿಸಿದ ಕಿರಣ್, ಸಾಹಿಲ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾವೇರಿ: ಬಿ.ಆರ್. ಕಿರಣ್ ಮೌಳಿ, ಸಾಹಿಲ್ ಸಿಪಾನಿ, ಅಭಿಜಿತ್ ನೈಂಪಲ್ಲಿ ಹಾಗೂ ಸುಕೇಶ ಶೆಣೈ ಗುರುವಾರ ಇಲ್ಲಿಯ ಜಿಲ್ಲಾ ಒಳಾಂಗಣ ಕ್ರೀಡಾಂಗಣದಲ್ಲಿ ಆರಂಭವಾದ ರಾಜ್ಯ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ನ ಪ್ರಧಾನ ಸುತ್ತಿಗೆ ಅರ್ಹತೆ ಗಿಟ್ಟಿಸಿದರು.ಕಿರಣ್ ಮೌಳಿ 30-20ರಿಂದ ಆರ್.ಕೌಶಿಕ್ ಮೇಲೂ; ಸಾಹಿಲ್ ಸಿಪಾನಿ 30-25ರಿಂದ ಅನೂಪ್ ಕಿರಣ್ ವಿರುದ್ಧವೂ; ಸುಕೇಶ ಶೆಣೈ 30-22ರಿಂದ ಮೋಹನ್ ಲಂಗೋಟಿ ಮೇಲೂ ಜಯ ಸಾಧಿಸಿದರು. ಇತರ ಪಂದ್ಯಗಳಲ್ಲಿ ಅಭಿಜಿತ್ ನೈಂಪಲ್ಲಿ 30-10ರಿಂದ ಕೆ.ಚಂದ್ರಶೇಖರ್ ಅವರನ್ನು; ಬಿ.ಎಸ್. ಪಾಲ್ಗುಣ 30-21ರಿಂದ ಬಿ.ಪ್ರವೀಣ್ ಅವರನ್ನು; ಆಶಿಶ್ ಮೆಲ್ವಿನ್ 30-26ರಿಂದ ಅಪೂರ್ವ ದೇವರಭಾವಿ ಅವರನ್ನು ಸೋಲಿಸಿ ಪ್ರಧಾನ ಸುತ್ತಿಗೆ ಅರ್ಹತೆ ಪಡೆದರು.ಎದುರಾಳಿ ಅಂಕಣಕ್ಕೆ ಇಳಿಯದ್ದರಿಂದ ಕಮಲ್‌ದೀಪ್ ಸಿಂಗ್ ಬೆವರು ಹರಿಸದೆ ಪ್ರಧಾನ ಸುತ್ತಿಗೆ ಮುನ್ನಡೆದರು. ಅರ್ಜುನ್ ಟಿ. ರಾಮ್ ಸಹ ಮುಂದಿನ ಹಂತಕ್ಕೆ ಮುನ್ನಡೆ ಪಡೆದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.