ಬ್ಯಾಡ್ಮಿಂಟನ್: ಪ್ರಧಾನ ಹಂತಕ್ಕೆ ಆನಂದ್ ಪವಾರ್

7

ಬ್ಯಾಡ್ಮಿಂಟನ್: ಪ್ರಧಾನ ಹಂತಕ್ಕೆ ಆನಂದ್ ಪವಾರ್

Published:
Updated:

ಒಯೆನ್ಸ್, ಡೆನ್ಮಾರ್ಕ್ (ಪಿಟಿಐ): ಭಾರತದ ಆನಂದ್ ಪವಾರ್ ಇಲ್ಲಿ ನಡೆಯುತ್ತಿರುವ ಡೆನ್ಮಾರ್ಕ್ ಸೂಪರ್ ಸರಣಿ ಬ್ಯಾಡ್ಮಿಂಟನ್ ಟೂರ್ನಿಯ ಪುರುಷರ ಸಿಂಗಲ್ಸ್ ವಿಭಾಗದ ಪ್ರಧಾನ ಹಂತ ಪ್ರವೇಶಿಸಿದರು.ಮಂಗಳವಾರ ನಡೆದ ಮೊದಲ ಪಂದ್ಯದಲ್ಲಿ ಆನಂದ್ 21-7, 21-7 ರಲ್ಲಿ ರಷ್ಯಾದ ಇವಾನ್ ಸೊಜೊನೊವ್ ವಿರುದ್ಧ ಗೆದ್ದರೆ, ಎರಡನೇ ಪಂದ್ಯದಲ್ಲಿ 21-19, 21-16 ರಲ್ಲಿ ಥಾಯ್ಲೆಂಡ್‌ನ ತನೊಸಾಕ್ ಸೇನ್‌ಸೊಮ್‌ಬೂನ್ಸಕ್ ಅವರನ್ನು ಮಣಿಸಿದರು.ಲಂಡನ್ ಒಲಿಂಪಿಕ್ಸ್ ಕಂಚಿನ ಪದಕ ವಿಜೇತ ಆಟಗಾರ್ತಿ ಸೈನಾ ನೆಹ್ವಾಲ್ ಅವರು  ಬುಧವಾರ ಕಣಕ್ಕಿಳಿಯಲಿದ್ದಾರೆ. ಅವರಿಲ್ಲಿ ಮೂರನೇ ಶ್ರೇಯಾಂಕ ಪಡೆದಿದ್ದಾರೆ. ಸೌರಭ್ ವರ್ಮ, ಅಜಯ್ ಜಯರಾಮ್ ಅವರ ಪಂದ್ಯಗಳು ಕೂಡ ಬುಧವಾರ ನಡೆಯಲಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry