ಬ್ಯಾಡ್ಮಿಂಟನ್: ಪ್ರಶಸ್ತಿಯ ವಿಶ್ವಾಸದಲ್ಲಿ ಸೈನಾ

ಬುಧವಾರ, ಜೂಲೈ 17, 2019
28 °C

ಬ್ಯಾಡ್ಮಿಂಟನ್: ಪ್ರಶಸ್ತಿಯ ವಿಶ್ವಾಸದಲ್ಲಿ ಸೈನಾ

Published:
Updated:

ನವದೆಹಲಿ (ಪಿಟಿಐ): ಭಾರತದ ಆಟಗಾರ್ತಿ ಸೈನಾ ನೆಹ್ವಾಲ್ ಬ್ಯಾಂಕಾಕ್‌ನಲ್ಲಿ ಮಂಗಳವಾರ ಆರಂಭವಾಗಲಿರುವ ಥಾಯ್ಲೆಂಡ್ ಓಪನ್ ಗ್ರ್ಯಾಂಡ್ ಪ್ರಿ ಗೋಲ್ಡ್ ಟೂರ್ನಿಯಲ್ಲಿ ಪ್ರಶಸ್ತಿ ಜಯಿಸುವ ವಿಶ್ವಾಸ ಹೊಂದಿದ್ದಾರೆ.ಈ ವರ್ಷದಲ್ಲಿ ಎರಡನೇ ಪ್ರಶಸ್ತಿಯನ್ನು ಜಯಿಸುವ ವಿಶ್ವಾಸದಿಂದಲೇ ಅಂಗಳಕ್ಕಿಳಿಯಲಿರುವ ಸೈನಾ ಬ್ಯಾಂಕಾಕ್‌ನ ಸಿಯು ಸ್ಪೋರ್ಟ್ಸ್ ಕಾಂಪ್ಲೆಕ್ಸ್‌ನಲ್ಲಿ ನಡೆಯಲಿರುವ ಪಂದ್ಯದ ಮಹಿಳೆಯರ ವಿಭಾಗದ ಸಿಂಗಲ್ಸ್‌ನ ಮೊದಲ ಸುತ್ತಿನ ಪಂದ್ಯದಲ್ಲಿ ಚೀನಾದ ಲು ಲಾನ್ ಅವರ ಸವಾಲನ್ನು ಎದುರಿಸಲಿದ್ದಾರೆ.ಭುಜದ ನೋವಿನಿಂದ ಚೇತರಿಸಿಕೊಂಡಿರುವ ಸೈನಾ  ಸ್ವಿಸ್ ಓಪನ್ ಗ್ರ್ಯಾಂಡ್ ಸ್ಲಾಮ್‌ನಲ್ಲಿ ಪ್ರಶಸ್ತಿ ಜಯಿಸಿದ್ದರು.ಈ ಟೂರ್ನಿಯಲ್ಲಿಯೇ ಪ್ರಶಸ್ತಿ ಪಡೆಯುವ ವಿಶ್ವಾಸವನ್ನು ಹೈದರಾಬಾದ್‌ನ ಸೈನಾ  ಹೊಂದಿದ್ದಾರೆ. ಆದರೆ, ಜಪಾನ್‌ನಲ್ಲಿ ನಡೆದ ಓಪನ್ ಸೂಪರ್ ಸರಣಿಯ ಮೊದಲ ಸುತ್ತಿನಲ್ಲಿಯೇ ಸೈನಾ ನಿರ್ಗಮಿಸಿದ್ದರು. ಆದ್ದರಿಂದ ಈ ಸಲ ಅವರು ಪ್ರಶಸ್ತಿ ಗೆಲ್ಲುವರೇ ಎನ್ನುವ ಕುತೂಹಲ ಎಲ್ಲರನ್ನು ಕಾಡುತ್ತಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry