ಶುಕ್ರವಾರ, ಏಪ್ರಿಲ್ 16, 2021
25 °C

ಬ್ಯಾಡ್ಮಿಂಟನ್: ಪ್ರಶಸ್ತಿ ಡಬಲ್ಸ್‌ನತ್ತ ಅಶ್ವಿನಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಉಡುಪಿ: ಅಗ್ರ ಶ್ರೇಯಾಂಕದ ಕೆ.ಅಶ್ವಿನಿ ಭಟ್, ಫೈವ್‌ಸ್ಟಾರ್ ರಾಜ್ಯ ರ‌್ಯಾಂಕಿಂಗ್ ಬ್ಯಾಡ್ಮಿಂಟನ್ ಟೂರ್ನಿಯ 13 ವರ್ಷದೊಳಗಿನವರ ವಿಭಾಗದಲ್ಲಿ ಪ್ರಶಸ್ತಿ ಡಬಲ್ಸ್‌ನತ್ತ ಹೆಜ್ಜೆಯಿಟ್ಟಿದ್ದಾಳೆ.ಮಂಗಳವಾರ, 15 ವರ್ಷದೊಳಗಿನ ಬಾಲಕರ ಸಿಂಗಲ್ಸ್‌ನಲ್ಲಿ ಅಗ್ರ ಶ್ರೇಯಾಂಕದ ಸೈಯ್ಯದ್ ಸಾದ್ ಅಲಿ ಮತ್ತು ಬಾಲಕಿಯರ  ವಿಭಾಗದಲ್ಲಿ ಅಪೇಕ್ಷಾ ನಾಯಕ್ ಕ್ರಮವಾಗಿ ಸೆಮಿಫೈನಲ್ ಮತ್ತು ಕ್ವಾರ್ಟರ್‌ಫೈನಲ್‌ನಲ್ಲಿ ನಿರ್ಗಮಿಸಿದ್ದು ವಿಶೇಷವಾಗಿತ್ತು.ಅಜ್ಜರಕಾಡಿನ ಜಿಲ್ಲಾ ಒಳಾಂಗಣ ಕ್ರೀಡಾಂಗಣದಲ್ಲಿ ಉಡುಪಿ ಜಿಲ್ಲಾ ಬ್ಯಾಡ್ಮಿಂಟನ್ ಸಂಸ್ಥೆ ವತಿಯಿಂದ ನಡೆಯುತ್ತಿರುವ ಟೂರ್ನಿಯಲ್ಲಿ ಅಶ್ವಿನಿ ಸೆಮಿಫೈನಲ್‌ನಲ್ಲಿ 22-20, 21-18 ರಲ್ಲಿ ಧೃತಿ ಯತೀಶ್ ವಿರುದ್ಧ ಜಯಗಳಿಸಿದಳು. ಅಶ್ವಿನಿ ಡಬಲ್ಸ್ ಜತೆಗಾತಿ, ಎರಡನೇ ಶ್ರೇಯಾಂಕದ ಯು.ಕೆ.ಮಿಥುಲಾ ಇನ್ನೊಂದು ಸೆಮಿಫೈನಲ್‌ನಲ್ಲಿ 21-10, 21-16ರಲ್ಲಿ ತ್ರಿಶಾ ಹೆಗ್ಡೆ ವಿರುದ್ಧ ಜಯಗಳಿಸಿದಳು. ಡಬಲ್ಸ್ ಪ್ರಶಸ್ತಿಗಾಗಿ ಅಶ್ವಿನಿ- ಮಿಥುಲಾ ಜೋಡಿ ಫೈನಲ್‌ನಲ್ಲಿ ಧೃತಿ- ತ್ರಿಶಾ ವಿರುದ್ಧ ಆಡಲಿದೆ.13 ವರ್ಷದೊಳಗಿನವರ ಬಾಲಕರ ಫೈನಲ್‌ನಲ್ಲಿ ಅಮೋಘ ಗುಪ್ತ ಮತ್ತು ರಾಹುಲ್ ಭಾರದ್ವಾಜ್ ಎದುರಾಳಿಗಳಾಗಿದ್ದಾರೆ. 15 ವರ್ಷದೊಳಗಿನವರ ಬಾಲಕರ ಸಿಂಗಲ್ಸ್ ಪ್ರಶಸ್ತಿಗಾಗಿ ಬಿ.ಎಂ.ರಾಹುಲ್ ಭಾರಧ್ವಾಜ್- ಎರಡನೇ ಶ್ರೇಯಾಂಕದ ಮಿಥುನ್ ಮಂಜುನಾಥ ವಿರುದ್ಧ ಆಡಲಿದ್ದಾರೆ. ಬಾಲಕಿಯರ ಫೈನಲ್‌ನಲ್ಲಿ ಶಿಖಾ ಗೌತಮ್. ಮಹಿಮಾ ಅಗರವಾಲ್ ವಿರುದ್ಧ ಆಡುವರು.17 ವರ್ಷದೊಳಗಿನ ಬಾಲಕರ ವಿಭಾಗದಲ್ಲಿ ಯಶಸ್ಸಿನ ಓಟ ಮುಂದುವರಿಸಿರುವ ಡೇನಿಯಲ್ ಫರಿದ್ ಫೈನಲ್ ತಲುಪಿದ್ದು, ಅಕ್ಷಯರಾಜ್ ಮೂರ್ತಿ ವಿರುದ್ಧ ಆಡಲಿದ್ದಾರೆ. ಈ ಇಬ್ಬರೂ ಶ್ರೇಯಾಂಕರಹಿತರು ಎಂಬುದು ವಿಶೇಷ. ಇದೇ ವಯೋವರ್ಗದ ಬಾಲಕಿಯರ ವಿಭಾಗದ ಫೈನಲ್‌ನಲ್ಲಿ ಏಳನೇ ಶ್ರೇಯಾಂಕದ ಶಿಖಾ ಗೌತಮ್ ಮತ್ತು ಎರಡನೇ ಶ್ರೇಯಾಂಕದ ಮಹಿಮಾ ಅಗರವಾಲ್ ಪ್ರಶಸ್ತಿಗೆ ಸೆಣಸಾಡುವರು.13 ವರ್ಷದೊಳಗಿನ ಬಾಲಕರ ಡಬಲ್ಸ್ ಸೆಮಿಫೈನಲ್ ಪಂದ್ಯಗಳಲ್ಲಿ ಮಂಗಳೂರಿನ ಅಭಯ್ ಪೈ ಮತ್ತು ಬಿ.ಚಿರಾಗ್ (ನಾಲ್ಕನೇ ಶ್ರೇಯಾಂಕ) ಜೋಡಿ 21-17, 10-21, 21-19 ರಲ್ಲಿ ಅಗ್ರ ಶ್ರೇಯಾಂಕದ ಅವಿನಾಶ್ ಎಸ್. ಮತ್ತು ಬಿ.ಶಂತನು ಅವರನ್ನು ಸೋಲಿಸಿತು. ಅಭಯ್- ಚಿರಾಗ್ ಜೋಡಿ ಫೈನಲ್‌ನಲ್ಲಿ ಎರಡನೇ ಶ್ರೇಯಾಂಕದ ಅಮೋಘ ಗುಪ್ತ ಮತ್ತು ಎಂ.ರೋಹಿತ್ ವಿರುದ್ಧ ಆಡಲಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.