ಬ್ಯಾಡ್ಮಿಂಟನ್: ಫೈನಲ್‌ಗೆ ಆದಿತ್ಯ, ಮಹಿಮಾ

ಗುರುವಾರ , ಮೇ 23, 2019
31 °C

ಫಲಿತಾಂಶ (ಮುನ್ನಡೆ+ಗೆಲುವು) 0/542LIVE

ಬ್ಯಾಡ್ಮಿಂಟನ್: ಫೈನಲ್‌ಗೆ ಆದಿತ್ಯ, ಮಹಿಮಾ

Published:
Updated:

ಹಾವೇರಿ: ಪ್ರಕಾಶ ಪಡುಕೋಣೆ ಬ್ಯಾಡ್ಮಿಂಟನ್ ಸಂಸ್ಥೆಯ ಆದಿತ್ಯ ಆರ್. ಪ್ರಕಾಶ್ ಹಾಗೂ ಬೆಳಗಾವಿಯ ರಜಸ್ ಜವಾಳ್ಕರ್ ಇಲ್ಲಿ ನಡೆಯುತ್ತಿರುವ ರಾಜ್ಯ ಹಾಗೂ ಜಿಲ್ಲಾ ಬ್ಯಾಡ್ಮಿಂಟನ್ ಸಂಸ್ಥೆಗಳ ಆಶ್ರಯದ ರಾಜ್ಯಮಟ್ಟದ ಬ್ಯಾಡ್ಮಿಂಟನ್ ಟೂರ್ನಿಯ  ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಫೈನಲ್ ಪ್ರವೇಶಿಸಿದರು.ಪ್ರಕಾಶ ಪಡುಕೋಣೆ ಬ್ಯಾಡ್ಮಿಂಟನ್ ಸಂಸ್ಥೆಯ ಮಹಿಮಾ ಅಗರ್‌ವಾಲ್ ಹಾಗೂ ಎನ್‌ಜಿವಿಯ ರೇಷ್ಮಾ ಕಾರ್ತಿಕ್ ಅವರು ಮಹಿಳೆಯರ ಸಿಂಗಲ್ಸ್ ವಿಭಾಗದ ಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ.ಜಿಲ್ಲಾ ಒಳಾಂಗಣ ಕ್ರೀಡಾಂಗಣದ ಬ್ಯಾಡ್ಮಿಂಟನ್ ಅಂಗಣದಲ್ಲಿ ಶನಿವಾರ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಕರ್ನಾಟಕ ಬ್ಯಾಡ್ಮಿಂಟನ್ ಸಂಸ್ಥೆಯ ರೋಹನ್ ಕ್ಯಾಸ್ಟಲಿನೋ ಗಾಯದ ಸಮಸ್ಯೆಯಿಂದ ಹಿಂದೆ ಸರಿದ ಕಾರಣ ಆದಿತ್ಯ ಪ್ರಕಾಶ್ ಅವರ ಫೈನಲ್ ಹಾದಿ ಸುಗಮವಾಯಿತು. ಮೊದಲೆರಡು ಸೆಟ್‌ಗಳ ಬಳಿಕ (21-19, 18-21) ಇವರು ಸಮಬಲ ಸಾಧಿಸಿದ್ದರು. ಮೂರನೇ ಸೆಟ್‌ನಲ್ಲಿ  ರೋಹನ್ ಹಿಂಜರಿದರು.ಇನ್ನೊಂದು ಸೆಮಿಫೈನಲ್‌ನಲ್ಲಿ ರಜಸ್ ಕರ್ನಾಟಕ ಬ್ಯಾಡ್ಮಿಂಟನ್ ಸಂಸ್ಥೆಯ ಪ್ರಸಾದ್ ವೆಂಕಟೇಶ ಅವರನ್ನು 21-18, 21-12ರ ನೇರ ಸೆಟ್‌ಗಳಿಂದ ಮಣಿಸಿದರು.ಮಹಿಳಾ ಸಿಂಗಲ್ಸ್ ವಿಭಾಗದ ಸೆಮಿಫೈನಲ್ ಪಂದ್ಯಗಳಲ್ಲಿ ಮಹಿಮಾ ಅಗರ್‌ವಾಲ್, ಲೀಲಾಲಕ್ಷ್ಮಿ ಅವರನ್ನು 21-18, 21-17 ರಲ್ಲಿ ಸೋಲಿಸಿದರೆ, ರೇಷ್ಮಾ ಜಮುನಾ ರಾಣಿ ಅವರ ವಿರುದ್ಧ 21-17, 20-22, 21-18 ರಲ್ಲಿ ಜಯ ಸಾಧಿಸಿದರು.

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry