ಬ್ಯಾಡ್ಮಿಂಟನ್: ಫೈನಲ್‌ಗೆ ಕಷ್ಯಪ್, ಜಯರಾಮ್

7

ಬ್ಯಾಡ್ಮಿಂಟನ್: ಫೈನಲ್‌ಗೆ ಕಷ್ಯಪ್, ಜಯರಾಮ್

Published:
Updated:

ಶ್ರೀನಗರ (ಪಿಟಿಐ): ಒಲಿಂಪಿಯನ್ ಪಿ.ಕಷ್ಯಪ್ ಹಾಗೂ ಅಜಯ್ ಜಯರಾಮ್ ಇಲ್ಲಿ ನಡೆಯುತ್ತಿರುವ 77ನೇ ರಾಷ್ಟ್ರೀಯ ಸೀನಿಯರ್ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ನ ಪುರುಷರ ವಿಭಾಗದ ಸಿಂಗಲ್ಸ್‌ನಲ್ಲಿ ಫೈನಲ್ ಪ್ರವೇಶಿಸಿದ್ದಾರೆ.ಮಂಗಳವಾರ ನಡೆದ ಸೆಮಿಫೈನಲ್‌ನಲ್ಲಿ ಕಷ್ಯಪ್ 21-5, 21-8ರಲ್ಲಿ ಕೆ.ಶ್ರೀಕಾಂತ್ ಎದುರು ಗೆದ್ದರು. ಮತ್ತೊಂದು ಸೆಮಿಫೈನಲ್‌ನಲ್ಲಿ ಜಯರಾಮ್ 21-14, 21-15ರಲ್ಲಿ ನಂದಾ ಗೋಪಾಲ್ ಅವರನ್ನು ಮಣಿಸಿದರು.ಮಹಿಳೆಯರ ವಿಭಾಗದ ಸಿಂಗಲ್ಸ್ ನಲ್ಲಿ ಒಲಿಂಪಿಯನ್ ಹಾಗೂ ಹಾಲಿ ಚಾಂಪಿಯನ್ ಪಿ.ವಿ.ಸಿಂಧು ಫೈನಲ್ ತಲುಪಿದರು. ಅವರು 8-21, 21-18, 21-13ರಲ್ಲಿ ಆರುಂಧತಿ ಅವರನ್ನು ಪರಾಭವಗೊಳಿಸಿದರು. ಇನ್ನೊಂದು ನಾಲ್ಕರ ಘಟ್ಟದ ಪಂದ್ಯದಲ್ಲಿ ಸಯ್ಯಾಲಿ ಗೋಖಲೆ 21-17, 9-21, 21-11ರಲ್ಲಿ ತಾನ್ವಿ ವಿರುದ್ಧ ಜಯ ಗಳಿಸಿದರು.ಮಿಶ್ರ ಡಬಲ್ಸ್ ವಿಭಾಗದಲ್ಲಿ ಅಶ್ವಿನಿ ಪೊನ್ನಪ್ಪ ಹಾಗೂ ತರುಣ್ ಕೋನಾ ಜೋಡಿ ಫೈನಲ್ ತಲುಪಿತು. ಈ ಜೋಡಿ 21-19, 19-21, 21-15ರಲ್ಲಿ ಪ್ರಜಕ್ತಾ ಸಾವಂತ್ ಹಾಗೂ ಮನು ಅತ್ರಿ ಎದುರು ಗೆಲುವು ಸಾಧಿಸಿತು.ಮಹಿಳೆಯರ ಡಬಲ್ಸ್‌ನಲ್ಲಿ ಜಿ.ಎಂ.ನಿಶ್ಚಿತಾ ಹಾಗೂ ವರ್ಷಾ ಬೆಳವಾಡಿ 21-16, 15-21, 21-17ರಲ್ಲಿ ಸನ್ಯೋಗೀತಾ ಘೋರ್ಪಡೆ ಹಾಗೂ ಸೈಲಿ ರಾಣೆ ಎದುರು ಗೆದ್ದು ಫೈನಲ್ ತಲುಪಿದರು. ಮತ್ತೊಂದು ಸೆಮಿಫೈನಲ್‌ನಲ್ಲಿ ಅಪರ್ಣಾ ಬಾಲನ್ ಹಾಗೂ ಸಿಕ್ಕಿ ರೆಡ್ಡಿ 16-21, 21-19, 21-15ರಲ್ಲಿ ಪ್ರಧಾನ್ಯಾ ಗಾದ್ರೆ ಹಾಗೂ ಕೆ.ಮನೀಷಾ ಎದುರು ಗೆದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry