ಬ್ಯಾಡ್ಮಿಂಟನ್: ಭಾರತಕ್ಕೆ ನಿರಾಸೆ

7

ಬ್ಯಾಡ್ಮಿಂಟನ್: ಭಾರತಕ್ಕೆ ನಿರಾಸೆ

Published:
Updated:

ನವದೆಹಲಿ (ಪಿಟಿಐ):  ಸಿಂಗಲ್ಸ್‌ನಲ್ಲಿ ಭಾರತದ ಭರವಸೆ ಎನಿಸಿರುವ ಸೈನಾ ನೆಹ್ವಾಲ್ ಕಳಪೆ ಪ್ರದರ್ಶನ ನೀಡಿದರು. ಇದರಿಂದ ಉಬೆರ್ ಕಪ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾರತ ಮಹಿಳಾ ತಂಡ 0-5ರಲ್ಲಿ ಚೀನಾದ ಎದುರು ಸೋಲು ಕಂಡಿತು.ಬುಧವಾರ ನಡೆದ ಪಂದ್ಯದಲ್ಲಿ ಸೈನಾ19-21, 19-21ರಲ್ಲಿ ವಿಶ್ವದ ಆರನೇ ಶ್ರೇಯಾಂಕದ ಯಂಜಿಯಿವೊ ಜಿಯಾಂಗ್ ಎದುರು ನಿರಾಸೆ ಅನುಭವಿಸಿದರು. ಡಬಲ್ಸ್‌ನ್ಲ್ಲಲಿ ಜ್ವಾಲಾ ಗುಟ್ಟಾ ಹಾಗೂ ಅಶ್ವಿನಿ ಪೊನ್ನಪ್ಪ ಜೋಡಿ ನಿರಾಸೆ ಕಂಡಿತು. ಪಿ.ವಿ. ಸಿಂಧು, ಪ್ರಜಕ್ತಾ ಸಾವಂತ್ ಸಹ ಇದೇ ಹಾದಿ ತುಳಿದರು.ಪುರುಷರಿಗೂ ನಿರಾಸೆ: ಪುರುಷ ತಂಡ ಮಕಾವ್‌ನಲ್ಲಿ ನಡೆಯುತ್ತಿರುವ ಥಾಮಸ್ ಕಪ್ ಬ್ಯಾಡ್ಮಿಂಟನ್ ಟೂರ್ನಿಯ ಏಷ್ಯಾ ವಲಯದ ಪಂದ್ಯದಲ್ಲಿ 2-3ರಲ್ಲಿ ಇಂಡೋನೇಷ್ಯಾದ ಎದುರು ನಿರಾಸೆ ಅನುಭವಿಸಿತು.ಸಿಂಗಲ್ಸ್‌ನಲ್ಲಿ ಬಿ. ಸಾಯಿ ಪ್ರಣೀತ್, ಡಬಲ್ಸ್ ವಿಭಾಗದಲ್ಲಿ ರೂಪೇಶ್ ಕುಮಾರ್ ಹಾಗೂ ಸನಾವೇ ಥಾಮಸ್ ಜೋಡಿ ಗೆಲುವು ಸಾಧಿಸಿತು. ಆದರೆ, ಆನಂದ್ ಪವಾರ್, ಅಕ್ಷಯ್ ದೇವಲ್ಕರ್ ಮತ್ತು ಪ್ರಣವ್ ಚೋಪ್ರಾ ಸೋಲು ಕಂಡರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry