ಮಂಗಳವಾರ, ಜನವರಿ 21, 2020
19 °C

ಬ್ಯಾಡ್ಮಿಂಟನ್: ರೋಹನ್‌ಗೆ ಗೆಲುವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಕರ್ನಾಟಕದ ರೋಹನ್ ಕ್ಯಾಸ್ಟೆಲಿನೊ ಇಲ್ಲಿ ಆರಂಭವಾದ 78ನೇ ರಾಷ್ಟ್ರೀಯ ಸೀನಿಯರ್ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ನಲ್ಲಿ ಜಯ ಪಡೆದರು.ಸೋಮವಾರ ನಡೆದ ಅರ್ಹತಾ ಸುತ್ತಿನ ಪಂದ್ಯದಲ್ಲಿ ಮಾಜಿ ರಾಷ್ಟ್ರೀಯ ಜೂನಿಯರ್ ಚಾಂಪಿಯನ್ ರೋಹನ್ 21–8, 21–12ರಲ್ಲಿ ಮಹಾರಾಷ್ಟ್ರದ ಸುಧಾನ್ಸು ಮೆಡ್ಸಿಕಾರ್ ಅವರನ್ನು ಸುಲಭವಾಗಿ ಮಣಿಸಿದರು.ಮತ್ತೊಂದು ಪಂದ್ಯದಲ್ಲಿ ಚೇತನ್ ಆನಂದ್ 21–5, 21–15 ರಲ್ಲಿ ಅಸ್ಸಾಂ ನ ವಿಶಾಲ್ ಗಾರ್ಗ್ ವಿರುದ್ಧ ಗೆಲುವು ಪಡೆದರು.

ಇನ್ನೊಂದು ಪಂದ್ಯದಲ್ಲಿ ಕರ್ನಾಟಕದ ಅದಿತ್ಯ ಪ್ರಕಾಶ್‌ 21–9, 21–7ರಲ್ಲಿ ಅನುರಾಗ್‌ ಠಾಕೂರ್‌ ಮೇಲೆ ಗೆಲುವು ಸಾಧಿಸಿದರು.

ಪ್ರತಿಕ್ರಿಯಿಸಿ (+)