ಬ್ಯಾಡ್ಮಿಂಟನ್: ರೋಹನ್‌ಗೆ ಪ್ರಶಸ್ತಿ

7

ಬ್ಯಾಡ್ಮಿಂಟನ್: ರೋಹನ್‌ಗೆ ಪ್ರಶಸ್ತಿ

Published:
Updated:
ಬ್ಯಾಡ್ಮಿಂಟನ್: ರೋಹನ್‌ಗೆ ಪ್ರಶಸ್ತಿ

ಬೆಂಗಳೂರು: ರೋಹನ್ ಕಾಸ್ಟೆಲಿನೊ ಹಾಗೂ ಜ್ಯಾಕೆಲಿನ್ ರೋಸ್ ಇಲ್ಲಿ ನಡೆದ 3 ಸ್ಟಾರ್ ರಾಜ್ಯ ರ‌್ಯಾಂಕಿಂಗ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಕ್ರಮವಾಗಿ ಪುರುಷ ಹಾಗೂ ಮಹಿಳೆಯರ ವಿಭಾಗದಲ್ಲಿ ಚಾಂಪಿಯನ್ ಆದರು.ಇಲ್ಲಿನ ಕರ್ನಾಟಕ ಬ್ಯಾಡ್ಮಿಂಟನ್ ಸಂಸ್ಥೆ  (ಕೆಬಿಎ) ಕ್ರೀಡಾಂಗಣದಲ್ಲಿ ಗುರುವಾರ ನಡೆದ ಫೈನಲ್ ಪಂದ್ಯದಲ್ಲಿ ರೋಹನ್ 21-16, 21-18ರಲ್ಲಿ ಪಿಪಿಬಿಎಯ ಪ್ರಭು ದೇಸಾಯಿ ಅವರನ್ನು ಮಣಿಸಿ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು.ಜ್ಯಾಕೆಲಿನ್‌ಗೆ ಪ್ರಶಸ್ತಿ: ಮಹಿಳೆಯರ ವಿಭಾಗದ ಸಿಂಗಲ್ಸ್ ಫೈನಲ್‌ನಲ್ಲಿ ಜ್ಯಾಕೆಲಿನ್ 21-15, 21-15ರಲ್ಲಿ ಸಿಂಧು ಭಾರದ್ವಾಜ್ ಅವರನ್ನು ಮಣಿಸಿ ಪ್ರಶಸ್ತಿಯನ್ನು ಗೆದ್ದುಕೊಂಡರು.ಇದೇ ಟೂರ್ನಿಯ ಪುರುಷರ ವಿಭಾಗದ ಡಬಲ್ಸ್‌ನಲ್ಲಿ ಕೆಬಿಎದ ಆದರ್ಶ ಕುಮಾರ್ ಹಾಗೂ ವೆಂಕಟೇಶ್ ಪ್ರಸಾದ್ ಜೋಡಿ 10-21, 21-7, 21-19ರಲ್ಲಿ ಡಿ. ಗುರುಪ್ರಸಾದ್ ಮತ್ತು ವಿನೀತ್ ಎಂ ಜೋಡಿಯನ್ನು ಮಣಿಸಿ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry