ಭಾನುವಾರ, ಆಗಸ್ಟ್ 25, 2019
20 °C

ಬ್ಯಾಡ್ಮಿಂಟನ್: ಸಂತೃಪ್‌ಗೆ ಪ್ರಶಸ್ತಿ

Published:
Updated:

ಬೆಂಗಳೂರು: ಉತ್ತಮ ಪ್ರದರ್ಶನ ತೋರಿದ ಎಚ್.ವಿ.ಸಂತೃಪ್ ಹಾಗೂ ವಿಜೇತಾ ಹರೀಶ್ ಅವರು ರಾಜ್ಯ 10 ವರ್ಷದೊಳಗಿನವರ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್ ಟೂರ್ನಿಯಲ್ಲಿ ಭಾನುವಾರ ತಲಾ ಎರಡು ಪ್ರಶಸ್ತಿಗಳನ್ನು ಜಯಿಸಿದರು.ಮಹಿಳಾ ಸೇವಾ ಸಮಾಜ ಆಯೋಜಿಸಿದ್ದ ಟೂರ್ನಿಯ ಬಾಲಕರ ವಿಭಾಗದ ಸಿಂಗಲ್ಸ್‌ನಲ್ಲಿ ಡಬ್ಲ್ಯುಪಿಬಿಎ ಕ್ಲಬ್‌ನ ಸಂತೃಪ್ 21-15, 21-14 ರಲ್ಲಿ ಅದೇ ಕ್ಲಬ್‌ನ ಸುಜಲ್ ಶೇಖರ್ ಅವರನ್ನು ಮಣಿಸಿ ಪ್ರಶಸ್ತಿ ಗೆದ್ದರು.ಡಬಲ್ಸ್ ವಿಭಾಗದ ಪ್ರಶಸ್ತಿ ಸುತ್ತಿನಲ್ಲಿ ಸುಜಲ್ ಜೊತೆಗೂಡಿ ಆಡಿದ ಸಂತೃಪ್ 21-15, 21-11ರಲ್ಲಿ ಎಂಎಸ್‌ಬಿಎ ಕ್ಲಬ್‌ನ ನಾರಾಯಣ್ ಭಟ್- ಜಿ.ಎಸ್. ಸುಮುಕ್ ಜೋಡಿ ವಿರುದ್ಧ ಗೆದ್ದರು. ಇನ್ನು, ಬಾಲಕಿಯರ ವಿಭಾಗದ ಡಬಲ್ಸ್‌ನಲ್ಲಿ ಎಚ್‌ಎಚ್‌ಬಿಎ ಕ್ಲಬ್‌ನ ಆರುಷಿ ರಾಜ್‌ಗೋಪಾಲ್ ಜೊತೆಗೂಡಿ ಆಡಿದ ಕಾಸ್ಮೋ ಕ್ಲಬ್‌ನ ವಿಜೇತಾ 21-14, 21-6 ರಲ್ಲಿ ಎಂಎಸ್‌ಬಿಎ ಕ್ಲಬ್‌ನ ಶೃದ್ಧಾ ಹೆಗ್ಡೆ-ಶುಭಗಾ ಅವರನ್ನು ಮಣಿಸಿ ಪ್ರಶಸ್ತಿ ಜಯಿಸಿದರು.

Post Comments (+)