ಗುರುವಾರ , ಸೆಪ್ಟೆಂಬರ್ 19, 2019
26 °C

ಬ್ಯಾಡ್ಮಿಂಟನ್: ಸಿಂಧುಗೆ ಚಾಂಪಿಯನ್ ಪಟ್ಟ

Published:
Updated:

ಬೆಂಗಳೂರು: ಸಿಂಧು ಭಾರದ್ವಾಜ್ ಇಲ್ಲಿ ನಡೆಯುತ್ತಿರುವ ಎಂ.ಎಸ್. ರಾಮಯ್ಯ-ಆನಂದ ಶರ್ಮ ರಾಜ್ಯ ರ‌್ಯಾಂಕಿಂಗ್ ಬ್ಯಾಡ್ಮಿಂಟನ್ ಟೂರ್ನಿಯ ಮಹಿಳೆಯರ ವಿಭಾಗದ ಸಿಂಗಲ್ಸ್‌ನಲ್ಲಿ ಚಾಂಪಿಯನ್ ಆಗಿದ್ದಾರೆ.ಸೋಮವಾರ ನಡೆದ ಫೈನಲ್‌ನಲ್ಲಿ ಸಿಂಧು 21-13, 21-16ರಲ್ಲಿ ಉತ್ತರಾ ಪ್ರಕಾಶ್ ಅವರನ್ನು ಸೋಲಿಸಿದರು. ಇದಕ್ಕೂ ಮೊದಲು ನಡೆದ ಸೆಮಿಫೈನಲ್ ಪಂದ್ಯಗಳಲ್ಲಿ ನಾಲ್ಕನೇ ಶ್ರೇಯಾಂಕದ ಸಿಂಧು 21-13, 21-19ರಲ್ಲಿ ಜಿ.ಎಂ.ನಿಶ್ಚಿತಾ ಎದುರೂ, ಉತ್ತರಾ 21-12, 21-14ರಲ್ಲಿ ಋತ್ ಮಿಶಾ ಎದುರು ಗೆಲುವು ಸಾಧಿಸಿದ್ದರು.ಪುರುಷರ ವಿಭಾಗದ ಸಿಂಗಲ್ಸ್‌ನಲ್ಲಿ ಅಭಿಷೇಕ್ ಯಲಿಗಾರ್ ಹಾಗೂ ಆದಿತ್ಯ ಆರ್.ಪ್ರಕಾಶ್ ಫೈನಲ್ ತಲುಪಿದ್ದಾರೆ. ಸೆಮಿಫೈನಲ್ ಪಂದ್ಯಗಳಲ್ಲಿ ಅಭಿಷೇಕ್ 21-15, 21-8ರಲ್ಲಿ ಜಗದೀಶ್ ಜಗದೀಶ್ ಯಾದವ್ ವಿರುದ್ಧವೂ, ಆದಿತ್ಯ 21-6, 21-19ರಲ್ಲಿ ರಿಶಿಕೇತ್ ಯಲಿಗಾರ್ ಎದುರೂ ಜಯ ಗಳಿಸಿದ್ದರು.ಕ್ವಾರ್ಟರ್ ಫೈನಲ್‌ನಲ್ಲಿಅಭಿಷೇಕ್ 21-12, 21-14ರಲ್ಲಿ ವೆಂಕಟೇಶ್ ಪ್ರಸಾದ್ ಎದುರೂ, ಜಗದೀಶ್ 21-16, 21-16ರಲ್ಲಿ ವೆಂಕಟೇಶ್ ಕಾಮತ್ ವಿರುದ್ಧವೂ, ಆದಿತ್ಯ 21-8, 21-14ರಲ್ಲಿ ರಜಾಸ್ ಜವಾಲ್ಕರ್ ಮೇಲೂ, ರಿಶಿಕೇತ್ 21-19, 21-15ರಲ್ಲಿ ಅಭಿಜಿತ್ ಎದುರೂ ಗೆಲುವು ಸಾಧಿಸಿದ್ದರು.

Post Comments (+)