ಭಾನುವಾರ, ಜನವರಿ 19, 2020
28 °C

ಬ್ಯಾಡ್ಮಿಂಟನ್: ಸಿಂಧುಗೆ ಪ್ರಶಸ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಕಾವು (ಪಿಟಿಐ): ಭಾರತದ ಉದಯೋನ್ಮುಖ ಆಟಗಾರ್ತಿ ಪಿ.ವಿ.ಸಿಂಧು ಇಲ್ಲಿ ನಡೆದ ಮಕಾವು ಓಪನ್ ಗ್ರ್ಯಾನ್ ಪ್ರಿ ಬ್ಯಾಡ್ಮಿಂಟನ್‌ ಟೂರ್ನಿಯ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ. ಪ್ರಸಕ್ತ ಋತುವಿನಲ್ಲಿ ಸಿಂಧುಗೆ ದೊರೆತ ಎರಡನೇ ಗ್ರ್ಯಾನ್ ಪ್ರಿ  ಪ್ರಶಸ್ತಿ  ಇದು.ಭಾನುವಾರ ನಡೆದ ಸಿಂಗಲ್ಸ್‌ ಫೈನಲ್‌ನ 37 ನಿಮಿಷಗಳ ಆಟದಲ್ಲಿ ಸಿಂಧು 21–15, 21–12 ರಲ್ಲಿ  ಕೆನಡಾದ ಲಿ ಮಿಷೆಲ್‌ ಅವರನ್ನು ಮಣಿಸಿದರು.

ಆಟ ಆರಂಭವಾಗಿ ಎರಡು ನಿಮಿಷ ಕಳೆಯುವಷ್ಟರಲ್ಲೇ ಸಿಂಧು ಮೊದಲ ಸೆಟ್‌ನಲ್ಲಿ 7–0ರಲ್ಲಿ ಮುನ್ನಡೆ ಸಾಧಿಸುವ ಮೂಲಕ ಸಿಂಧು ಎದುರಾಳಿ ಆಟಗಾರ್ತಿಯ ಮೇಲೆ ಒತ್ತಡ ಹೇರಿದರು. ನಂತರ ಪುಟಿದೆದ್ದ ಲಿ ತೀವ್ರ ಪೈಪೋಟಿ ಒಡ್ಡಿದರು. ಆದರೆ ಅಂತಿಮವಾಗಿ ಭಾರತದ ಆಟಗಾರ್ತಿ ಕೇವಲ 16 ನಿಮಿಷದಲ್ಲೇ ಮೊದಲ ಸೆಟ್‌ ತಮ್ಮದಾಗಿಸಿಕೊಂಡರು.

ಪ್ರತಿಕ್ರಿಯಿಸಿ (+)