ಶನಿವಾರ, ಮೇ 21, 2022
26 °C

ಬ್ಯಾಡ್ಮಿಂಟನ್: ಸೆಮಿಫೈನಲ್‌ಗೆ ಅಜಿಂಕ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬೆಳಗಾವಿಯ ಅಜಿಂಕ್ಯ ಇಲ್ಲಿ ನಡೆಯುತ್ತಿರುವ ಯೊನೆಕ್ಸ್ ಸನ್ ರೈಸ್ ರಾಜ್ಯ ಬ್ಯಾಡ್ಮಿಂಟನ್ ಟೂರ್ನಿಯ 10 ವರ್ಷದೊಳಗಿನವರ ಬಾಲಕರ ವಿಭಾಗದಲ್ಲಿ ಸೆಮಿಫೈನಲ್ ಪ್ರವೇಶಿಸಿದ್ದಾರೆ.

ದೇವನಹಳ್ಳಿ ಕ್ಲಬ್‌ನಲ್ಲಿ ನಡೆದ ಭಾನುವಾರ ನಡೆದ ಕ್ವಾರ್ಟರ್ ಫೈನಲ್‌ನಲ್ಲಿ ಐದನೇ ಶ್ರೇಯಾಂಕದ ಅಜಿಂಕ್ಯ 21-4, 18-21, 21-17ರಲ್ಲಿ ಡಬ್ಲ್ಯುಪಿಬಿಎನ ಸಿ.ಜೆ.ಥಾಮಸ್ ಅವರನ್ನು ಸೋಲಿಸಿದರು.

ಇನ್ನುಳಿದ ಕ್ವಾರ್ಟರ್ ಫೈನಲ್ ಪಂದ್ಯಗಳಲ್ಲಿ ಬೆಳಗಾವಿಯ ಯಶ್ ಪಾಟೀಲ್ 21-10, 21-4ರಲ್ಲಿ ಎಂಎಲ್‌ಎಕ್ಸ್‌ನ ಸುಜುಲ್ ಎದುರೂ, ಸಿ.ಎಸ್.ಸಾಕೇತ್ 21-8, 21-9ರಲ್ಲಿ ಎಚ್.ವಿ.ಸಂತೃಪ್ತ್ ವಿರುದ್ಧವೂ, ಶಿವದೀಪ್ ಜಯಂತ್ 21-15, 21-18ರಲ್ಲಿ ಚಿನ್ಮಯ ವೆಂಕಟೇಶ್ ಮೇಲೂ ಗೆಲುವು ಸಾಧಿಸಿದರು.

ಬಾಲಕಿಯರ ವಿಭಾಗದಲ್ಲಿ ರಿಚಾ ಮುಕ್ತಿಬೋಧ್ 21-10, 21-2ರಲ್ಲಿ ಅನುಷ್ಕಾ ಗಣೇಶ್ ಎದುರು ಗೆದ್ದು ಸೆಮಿಫೈನಲ್ ತಲುಪಿದರು. ಇನ್ನುಳಿದ ಎಂಟರ ಘಟ್ಟದ ಪಂದ್ಯಗಳಲ್ಲಿ ಆದ್ವಿಕಾ ಗಣೇಶ್ 21-5, 21-10ರಲ್ಲಿ ತಾನ್ಯಾ ಹೇಮಂತ್ ಎದುರೂ, ಆದಯಾ ವರಿಯಾತ್ 21-6, 21-14ರಲ್ಲಿ ದೀತ್ಯಾ ಜಗದೀಶ್ ಮೇಲೂ ಜಯ ಸಾಧಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.