ಬ್ಯಾಡ್ಮಿಂಟನ್: ಸೆಮಿಫೈನಲ್‌ಗೆ ಬಿಪಿಸಿಎಲ್ ತಂಡ

7

ಬ್ಯಾಡ್ಮಿಂಟನ್: ಸೆಮಿಫೈನಲ್‌ಗೆ ಬಿಪಿಸಿಎಲ್ ತಂಡ

Published:
Updated:ಬೆಂಗಳೂರು: ಭಾರತ್ ಪೆಟ್ರೋಲಿಯಮ್ ಕಾರ್ಪೋರೇಷನ್ ಲಿಮಿಟೆಡ್ (ಬಿಪಿಸಿಎಲ್) ತಂಡ 34ನೇ ಪಿಎಸ್‌ಪಿಬಿ  ಅಂತರ ವಿಭಾಗದ ಬ್ಯಾಡ್ಮಿಂಟನ್ ಟೂರ್ನಿಯ ಪುರುಷರ ತಂಡ ವಿಭಾಗದಲ್ಲಿ ಸೆಮಿಫೈನಲ್ ಪ್ರವೇಶಿಸಿದ್ದಾರೆ.ಕರ್ನಾಟಕ ಬ್ಯಾಡ್ಮಿಂಟನ್ ಸಂಸ್ಥೆ  (ಕೆಒಎ) ಹಾಗೂ ಒಎನ್‌ಜಿಸಿ ಆಶ್ರಯದಲ್ಲಿ ಈ ಟೂರ್ನಿ ಆಯೋಜನೆಯಾಗಿದೆ. ಕೆಒಎ ಕೋರ್ಟ್‌ನಲ್ಲಿ ಬುಧವಾರ ನಡೆದ ಕ್ವಾರ್ಟರ್ ಫೈನಲ್ ಹಣಾಹಣಿಯಲ್ಲಿ ಬಿಪಿಸಿಎಲ್ 3-0ರಲ್ಲಿ ಆಯಿಲ್ ಇಂಡಿಯಾ ಲಿಮಿಟೆಡ್ (ಒಐಎಲ್) ತಂಡವನ್ನು ಮಣಿಸಿತು.

ಇನ್ನೊಂದು ಎಂಟರ ಘಟ್ಟದ ಪೈಪೋಟಿಯಲ್ಲಿ ಹಿಂದುಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (ಎಚ್‌ಪಿಸಿಎಲ್) ತಂಡದವರು 3-0ರಲ್ಲಿ ಎಂಜಿನಿಯರ್ಸ್‌ ಇಂಡಿಯಾ ಲಿಮಿಟೆಡ್ (ಇಐಎಲ್) ಎದುರು ಗೆಲುವು ಸಾಧಿಸಿ ನಾಲ್ಕರ ಘಟ್ಟಕ್ಕೆ ಲಗ್ಗೆ ಇಟ್ಟರು. ಮತ್ತೊಂದು ಪಂದ್ಯದಲ್ಲಿ ಇಂಡಿಯನ್ ಆಯಿಲ್ ಕಾಪೋರೇಷನ್ ಲಿಮಿಟೆಡ್ (ಐಒಸಿಎಲ್) 3-0ರಲ್ಲಿ ಜಿಎಐಎಲ್ ಎದುರು ಜಯ ಪಡೆಯಿತು.ಪ್ರಜಕ್ತಾ ಸಾವಂತ್, ಅಶ್ವಿನ್ ಪೊನ್ನಪ್ಪ, ಗುರುಸಾಯಿದತ್ ಅವರು ಟೂರ್ನಿಯಲ್ಲಿ ಪಾಲ್ಗೊಂಡ ಪ್ರಮುಖ ಆಟಗಾರರು. ಕರ್ನಾಟಕದ ಅನೂಪ್ ಶ್ರೀಧರ್, ಅರವಿಂದ್ ಭಟ್ ಅವರು ಬಿಪಿಸಿಎಲ್‌ಗೆ ತಂಡದಲ್ಲಿಆಡುತ್ತಿದ್ದಾರೆ.ಜಿಎಐಎಲ್ ಶುಭಾರಂಭ:

ಮಹಿಳೆಯರ ತಂಡ ವಿಭಾಗದ ಲೀಗ್ ಪಂದ್ಯಗಳಲ್ಲಿ ಒಎನ್‌ಜಿಸಿ 3-0ರಲ್ಲಿ ಜಿಎಐಎಲ್ ಮೇಲೆ ಗೆಲುವು ಸಾಧಿಸಿ ಶುಭಾರಂಭ ಮಾಡಿತು. ಇನ್ನೊಂದು ಲೀಗ್ ಪಂದ್ಯದಲ್ಲಿ ಐಒಸಿಎಲ್ 3-0ರಲ್ಲಿ ಇಐಎಲ್ ಎದುರು ಜಯ ಪಡೆಯಿತು.ನಾಲ್ಕರ ಘಟ್ಟಕ್ಕೆ ಎಚ್‌ಪಿಸಿಎಲ್: ಹಿರಿಯರ ಪುರುಷ ತಂಡ ವಿಭಾಗದ ಸ್ಪರ್ಧೆಯ ಕ್ವಾರ್ಟರ್ ಫೈನಲ್ ಹೋರಾಟದಲ್ಲಿ ಎಚ್‌ಪಿಸಿಎಲ್ 2-0ರಲ್ಲಿ ಒಐಎಲ್ ಮೇಲೂ, ಐಒಸಿಎಲ್ 2-0ರಲ್ಲಿ ಜಿಎಐಎಲ್ ವಿರುದ್ಧವೂ, ಒಎನ್‌ಜಿಸಿ 2-0ರಲ್ಲಿ ಇಐಎಲ್ ವಿರುದ್ಧವೂ ಜಯ ಪಡೆದು ನಾಲ್ಕರ ಘಟ್ಟ ಪ್ರವೇಶಿಸಿವೆ.

ಹಿರಿಯರ ಮಹಿಳಾ ವಿಭಾಗದಲ್ಲಿ ಒಎನ್‌ಜಿಸಿ 3-0ರಲ್ಲಿ ಇಐಎಲ್ ಮೇಲೂ. ಐಒಸಿಎಲ್ 3-0ರಲ್ಲಿ ಜಿಎಐಎಲ್ ವಿರುದ್ಧವೂ ಗೆಲುವು ಸಾಧಿಸಿದವು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry