ಶುಕ್ರವಾರ, ಡಿಸೆಂಬರ್ 6, 2019
24 °C

ಬ್ಯಾಡ್ಮಿಂಟನ್: ಸೈನಾ ನೆಹ್ವಾಲ್ ಶುಭಾರಂಭ

Published:
Updated:
ಬ್ಯಾಡ್ಮಿಂಟನ್: ಸೈನಾ ನೆಹ್ವಾಲ್ ಶುಭಾರಂಭ

ನವದೆಹಲಿ (ಪಿಟಿಐ): ಸೈನಾ ನೆಹ್ವಾಲ್ ಅವರು ಇಲ್ಲಿ ಆರಂಭವಾದ ಕೊರಿಯಾ ಸೂಪರ್ ಸೀರಿಸ್ ಬ್ಯಾಡ್ಮಿಂಟನ್ ಟೂರ್ನಿಯ ಮೊದಲ ಸುತ್ತಿನಲ್ಲಿ ಪ್ರಯಾಸದ ಗೆಲುವು ಪಡೆದರು. ಬುಧವಾರ ನಡೆದ ಪಂದ್ಯದಲ್ಲಿ ಸೈನಾ 19-21, 21-14, 22-20 ರಲ್ಲಿ ಚೈನೀಸ್ ತೈಪೆಯ ಸು ಯಿಂಗ್ ತಾಯ್ ಅವರನ್ನು ಮಣಿಸಿದರು.ವಿಶ್ವ ರ್ಯಾಂಕಿಂಗ್‌ನಲ್ಲಿ ನಾಲ್ಕನೇ ಸ್ಥಾನದಲ್ಲಿರುವ ಭಾರತದ ಆಟಗಾರ್ತಿ 50 ನಿಮಿಷಗಳ ಹೋರಾಟದ ಬಳಿಕ ಗೆಲುವು ಪಡೆದುಕೊಂಡರು. ಮೊದಲ ಸೆಟ್ ಕಳೆದುಕೊಂಡ ಸೈನಾ ಬಳಿಕ ತಿರುಗೇಟು ನೀಡಿ ಎರಡನೇ ಸುತ್ತಿಗೆ ಮುನ್ನಡೆದರು.ಮೊದಲ ಸೆಟ್‌ನಲ್ಲಿ ಒಂದು ಹಂತದಲ್ಲಿ ಇಬ್ಬರೂ 18-18 ರಲ್ಲಿ ಸಮಬಲ ಸಾಧಿಸಿದ್ದರು. ಬಳಿಕ ಸು ಯಿಂಗ್ ಆಕರ್ಷಕ ಆಟವಾಡಿ ಸೆಟ್ ಗೆದ್ದರು. ಆದರೆ ಎರಡನೇ ಸೆಟ್‌ನಲ್ಲಿ ಆರಂಭದಲ್ಲೇ 5-1ರಲ್ಲಿ ಮೇಲುಗೈ ಪಡೆದ ಸೈನಾ ಬಳಿಕ ಗೆಲುವಿನ ಹಾದಿಯಲ್ಲಿ ನಡೆದರು. ನಿರ್ಣಾಯಕ ಸೆಟ್‌ನಲ್ಲಿ  ಸೈನಾ ಒಂದು ಹಂತದಲ್ಲಿ 8-13 ರಲ್ಲಿ ಹಿನ್ನಡೆ ಸಾಧಿಸಿದ್ದರು. ಅಲ್ಲಿಂದ ಪುಟಿದೆದ್ದ ಅವರು ರೋಚಕ ಗೆಲುವು ಪಡೆದರು.ಮಿಶ್ರ ಡಬಲ್ಸ್ ವಿಭಾಗದಲ್ಲಿ ಜ್ವಾಲಾ ಗುಟ್ಟಾ- ವಿ. ದಿಜು ಜೋಡಿ 21-19, 21-18 ರಲ್ಲಿ ಇಂಗ್ಲೆಂಡ್‌ನ ನಥಾನ್ ರಾಬರ್ಟ್ಸನ್ ಮತ್ತು ಜೆನ್ನಿ ವಾಲ್‌ವರ್ಕ್ ಅವರನ್ನು ಮಣಿಸಿತು. ಮಹಿಳೆಯರ ಡಬಲ್ಸ್ ವಿಭಾಗದ ಮೊದಲ ಸುತ್ತಿನಲ್ಲಿ ಜ್ವಾಲಾ ಮತ್ತು ಅಶ್ವಿನಿ ಪೊನ್ನಪ್ಪ ಜೋಡಿ ಜಯ ಪಡೆಯಿತು.

ಪ್ರತಿಕ್ರಿಯಿಸಿ (+)