ಶನಿವಾರ, ಜನವರಿ 18, 2020
19 °C

ಬ್ಯಾರಿ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬ್ಯಾರೀಸ್ ಕಲ್ಯಾಣ ಸಂಸ್ಥೆಯು ಬ್ಯಾರಿ ಮಾತೃಭಾಷೆಯ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲು ಅರ್ಜಿ ಆಹ್ವಾನಿಸಿದೆ.ಎಸ್ಸೆಸ್ಸೆಲ್ಸಿಯಲ್ಲಿ ಶೇ 85, ಪಿಯುಸಿಯಲ್ಲಿ ಶೇ 80 ಹಾಗೂ ಯಾವುದೇ ಪದವಿಯಲ್ಲಿ ಶೇ 75, ಇತರ ಉನ್ನತ ವೃತ್ತಿಪರ ಕೋರ್ಸ್‌ಗಳಲ್ಲಿ ಶೇ 70 ಮತ್ತು ಅದಕ್ಕಿಂತ ಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಅರ್ಜಿ ಸಲ್ಲಿಸಬಹುದು.ಬಿಳಿ ಹಾಳೆಯಲ್ಲಿ ಬರೆದ ಅರ್ಜಿಗಳನ್ನು ಜ.26 ರೊಳಗೆ  ಬ್ಯಾರೀಸ್ ಕಲ್ಯಾಣ ಸಂಸ್ಥೆ, ಪಿಝಾ ಡೆವಲಪರ್ಸ್‌, ನಂ.25-1, ರೆಸಿಡೆನ್ಸಿ ರಸ್ತೆ ಇಲ್ಲಿ ಸಲ್ಲಿಸಬೇಕು. ಫೆಬ್ರುವರಿಯಲ್ಲಿ ನಡೆಯಲಿರುವ ಸಮಾರಂಭದಲ್ಲಿ ಪ್ರತಿಭಾ ಪುರಸ್ಕಾರ ನೀಡಲಾಗುವುದು ಎಂದು ಸಂಸ್ಥೆಯ ಅಧ್ಯಕ್ಷ ಬಿ.ಎಂ.ಫಾರೂಕ್  ತಿಳಿಸಿದ್ದಾರೆ. ಮಾಹಿತಿಗೆ-98450 33434.

ಪ್ರತಿಕ್ರಿಯಿಸಿ (+)