ಬ್ಯಾರೇಜ್ ತುಂಬಿಸುವ ಕಾಮಗಾರಿ ಆರಂಭಕ್ಕೆ ಚಾಲನೆ

7

ಬ್ಯಾರೇಜ್ ತುಂಬಿಸುವ ಕಾಮಗಾರಿ ಆರಂಭಕ್ಕೆ ಚಾಲನೆ

Published:
Updated:

ಜಮಖಂಡಿ: ಚಿಕ್ಕಪಡಸಲಗಿ ಬ್ಯಾರೇಜ್ ಕೆಳಭಾಗದ ಆಲಮಟ್ಟಿ ಜಲಾಶಯದ ಹಿನ್ನೀರನ್ನು ವಿದ್ಯುತ್ ಪಂಪ್‌ಸೆಟ್‌ಗಳನ್ನು ಬಳಸಿ ಚಿಕ್ಕಪಡಸಲಗಿ ಬ್ಯಾರೇಜ್‌ಗೆ ತುಂಬಿಸುವ ಕಾರ್ಯ ಈ ತಿಂಗಳ ಅಂತ್ಯದ ವೇಳೆಗೆ ಪೂರ್ಣ ಗೊಳ್ಳಲಿದೆ ಎಂದು ಮಾಜಿ ಕೇಂದ್ರ ಸಚಿವ ಸಿದ್ದು ನ್ಯಾಮಗೌಡ ಹೇಳಿದರು.ಕೃಷ್ಣಾ ತೀರ ರೈತ ಸಂಘದ ಆಶ್ರಯದಲ್ಲಿ ಚಿಕ್ಕಪಡಸಲಗಿ ಬ್ಯಾರೇಜ್‌ನಲ್ಲಿ ಆಲಮಟ್ಟಿ ಜಲಾಶಯದ ಹಿನ್ನೀರು ಸಂಗ್ರಹಿಸಲು ಗೇಟ್ ಅಳವಡಿಕೆಯ ಪೂರ್ವ ಸಿದ್ಧತೆಗಾಗಿ `ಜೆಸಿಬಿ'ಯಿಂದ ಬ್ಯಾರೇಜ್‌ನ ಹೂಳೆತ್ತುವ ಕಾಮಗಾರಿಗೆ ಭಾನುವಾರ ಚಾಲನೆ ನೀಡಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತ ನಾಡಿದರು.ಇದೇ 21 ರಂದು ಬ್ಯಾರೇಜ್‌ಗೆ ಗೇಟ್ ಅಳವಡಿಕೆ ಕಾರ್ಯ ಆರಂಭ ವಾಗಲಿದೆ. ಈ ತಿಂಗಳ ಅಂತ್ಯದ ವೇಳೆಗೆ ಸುಮಾರು 1.5 ಟಿಎಂಸಿ ಅಡಿ ನೀರನ್ನು ಎತ್ತಿ ಬ್ಯಾರೇಜ್‌ನಲ್ಲಿ ಸಂಗ್ರಹಿಸುವ ಗುರಿ ಹೊಂದಲಾಗಿದೆ. ಇದಕ್ಕಾಗಿ 100 `ಎಚ್‌ಪಿ'ಯ 25 ಪಂಪ್‌ಸೆಟ್‌ಗಳನ್ನು ಅಳವಡಿಸಿ ಪ್ರತಿದಿನ 0.05 ಟಿಎಂಸಿ ಅಡಿ ನೀರನ್ನು ಬ್ಯಾರೇಜ್‌ಗೆ ಹರಿಸಲಾಗುವುದು.

ಹಿನ್ನೀರು ಎತ್ತಲು ಬಳಸುವ ಪಂಪ್‌ಸೆಟ್‌ಗಳಿಗೆ ಬೇಕಾ ಗುವ 2.5 ಮೆಗಾವ್ಯಾಟ್ ವಿದ್ಯುತ್‌ನ್ನು ಜಮಖಂಡಿ ಶುಗರ್ಸ್‌ನಿಂದ ಪೂರೈಸ ಲಾಗುವುದು. ಇದಕ್ಕಾಗಿ ಜಮಖಂಡಿ ಶುಗರ್ಸ್‌ನಿಂದ 7 ಕಿ.ಮೀ. ಪ್ರತ್ಯೇಕ ವಿದ್ಯುತ್ ಸಂಪರ್ಕ ಲೈನ್ ಹಾಕಲಾಗು ವುದು. ವಿದ್ಯುತ್ ಲೈನ್ ನಿರ್ಮಿಸುವ ಕಾಮಗಾರಿ ಈಗ ಪ್ರಗತಿಯಲ್ಲಿದೆ.ಚಿಕ್ಕಪಡಸಲಗಿ ಬ್ಯಾರೇಜ್‌ನ ಮೇಲ್ಬಾಗದಲ್ಲಿ ಕೃಷ್ಣಾ ನದಿಯ ಎರಡೂ ಬದಿಯಲ್ಲಿ 10 `ಎಚ್‌ಪಿ'ಯ ಸುಮಾರು 4200 ಪಂಪ್‌ಸೆಟ್‌ಗಳು ಇವೆ. ಈ ಪಂಪ್‌ಸೆಟ್‌ಗಳ ಮೂಲಕ ಪ್ರತಿದಿನ ಸುಮಾರು 0.032 ಟಿಎಂಸಿ ಅಡಿ ನೀರನ್ನು ಎತ್ತಿ ಬೆಳೆಗಳಿಗೆ ಉಣಿಸಲಾಗುವುದು.ಪ್ರತಿನಿತ್ಯ ಬ್ಯಾರೇಜ್‌ನಿಂದ ಬಳಕೆಯಾಗುವ (0.032 ಟಿಎಂಸಿ ಅಡಿ) ನೀರಿನ ಪ್ರಮಾಣಕ್ಕಿಂತ ಪ್ರತಿನಿತ್ಯ ಬ್ಯಾರೇಜ್‌ಗೆ ತುಂಬಿಸುವ (0.05 ಟಿಎಂಸಿ ಅಡಿ) ನೀರಿನ ಪ್ರಮಾಣದಲ್ಲಿ ಹೆಚ್ಚಳ ಇರುವುದರಿಂದ ಬ್ಯಾರೇಜ್‌ನಲ್ಲಿ ನೀರು ಸಂಗ್ರಹ ಸಾಧ್ಯವಾಗಲಿದೆ. ಈಗ ಸಂಗ್ರಹಿಸುವ ನೀರು ಏಪ್ರಿಲ್ ತಿಂಗಳ ಅಂತ್ಯದ ವರೆಗೆ ಲಭ್ಯವಾಗಲಿದೆ.ಬರುವ ವರ್ಷ ಚಿಕ್ಕಪಡಸಲಗಿ ಬ್ಯಾರೇಜ್‌ನ ಎತ್ತರವನ್ನು ಎರಡು ಮೀಟರ್ ಹೆಚ್ಚಿಸುವ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗುವುದು. ಬ್ಯಾರೆಜ್ ಎತ್ತರ ಹೆಚ್ಚಿಸಿದ ನಂತರ ಬ್ಯಾರೇಜ್‌ನ ನೀರು ಸಂಗ್ರಹ ಸಾಮರ್ಥ್ಯ 3.5 ಟಿಎಂಸಿ ಅಡಿ ಆಗಲಿದೆ. ಈ ಯೋಜನೆಗೆ ಕೆಬಿಜೆಎಲ್‌ನಿಂದ ತಾಂತ್ರಿಕ ಅನು ಮೋದನೆ ಹಾಗೂ ಮುಖ್ಯಮಂತ್ರಿ ಗಳಿಂದ ಆಡಳಿತಾತ್ಮಕ ಮಂಜೂರಾತಿ ಪಡೆಯಲಾಗಿದೆ. ಈ ಯೋಜನೆ ಅನು ಷ್ಠಾನಕ್ಕೆ ತಗಲುವ ಸುಮಾರು ರೂ.5.5 ಕೋಟಿ ವೆಚ್ಚವನ್ನು ಸದ್ಯಕ್ಕೆ ರೈತರೇ ಭರಿಸಲಿದ್ದಾರೆ ಎಂದು ತಿಳಿಸಿದರು.ಈ ಯೋಜನೆಯ ಕಾಮಗಾರಿಗೆ ಜಮಖಂಡಿ ನಗರದ ಎಲ್ಲಾ ಗ್ಯಾರೇಜ್‌ಗಳ ಕಾರ್ಮಿಕರು ಸ್ವಯಂ ಪ್ರೇರಣೆಯಿಂದ ಶ್ರಮದಾನ ಮಾಡಲು ಮುಂದೆ ಬಂದಿದ್ದಾರೆ.  ಈ ಯೋಜನೆ ಪೂರ್ಣಗೊಂಡಾಗ 60 ಸಾವಿರ ಎಕರೆ ಜಮೀನಿಗೆ ಬೇಸಿಗೆಯಲ್ಲಿ ನೀರಾವರಿ ಸೌಲಭ್ಯ ಮುಂದುವರಿಯಲಿದೆ.ಜಿ.ಪಂ.ಸದಸ್ಯ ವಿಠ್ಠಲ ಚೌರಿ, ಜಿ.ಪಂ.ಸದಸ್ಯ ಅರ್ಜುನ ದಳವಾಯಿ, ತಾ.ಪಂ.ಸದಸ್ಯ ಪದ್ಮಣ್ಣ ಜಕನೂರ, ವಕೀಲ ರವಿ ಯಡಹಳ್ಳಿ, ವಕೀಲ ಎಸ್.ಆರ್.ಕಾಡಗಿ, ನಿಂಗಪ್ಪ ಗವರೋಜಿ ಮತ್ತಿತರರು ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry