ಬ್ಯಾಲೆಯಲ್ಲಿ ನೃತ್ಯ ಬಲೆ

7

ಬ್ಯಾಲೆಯಲ್ಲಿ ನೃತ್ಯ ಬಲೆ

Published:
Updated:

ಶುಭ್ರ ಶ್ವೇತ ವಸ್ತ್ರಧಾರಿ, ಪುಟ್ಟ ನೆರಿಗೆಗಳ ತುಂಡು ಲಂಗದಲ್ಲಿ ಹಂಸಿನಿಯಂತೆ ಗಾಳಿಯೊಂದಿಗೆ ಹೆಜ್ಜೆ ಹಾಕುತ್ತಿದ್ದಳು. ನೆಲಕ್ಕೆ ಕಾಲು ತಾಕಿದರೆ ನೆಲಕ್ಕೆ ನೋವಾದೀತು ಎಂದು ವೇದಿಕೆಗೆ ಬೆರಳು ಸೋಕಿಸುತ್ತ ನರ್ತಿಸುತ್ತಿದ್ದರು ರಷ್ಯದ ಪಟುಗಳು.ಆರ್ಟ್ ಆಫ್ ಲಿವಿಂಗ್ ಕೇಂದ್ರದಲ್ಲಿ ನಡೆದ 5ನೇ ಅಂತರರಾಷ್ಟ್ರೀಯ ಮಹಿಳಾ ಸಮ್ಮೇಳನದ ಅಂಗವಾಗಿ ಸೇಂಟ್ ಪೀಟರ್ಸ್‌ಬರ್ಗ್ ಬ್ಯಾಲೆ ಕಂಪೆನಿಯ ನೃತ್ಯಪಟುಗಳು ಆಕರ್ಷಕ ಪ್ರದರ್ಶನ ನೀಡಿದರು.ಮೂರು ದಿನಗಳ ಸಮ್ಮೇಳನವನ್ನು ಆರ್ಟ್ ಆಫ್ ಲಿವಿಂಗ್‌ನ ಶ್ರೀ ಶ್ರೀ ರವಿಶಂಕರ್ ಗುರೂಜಿ  ಉದ್ಘಾಟಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry