ಬ್ಯಾಸ್ಕೆಟ್‌ಬಾಲ್:ಫೈನಲ್‌ಗೆ ಬೀಗಲ್ಸ್

ಬುಧವಾರ, ಜೂಲೈ 24, 2019
22 °C

ಬ್ಯಾಸ್ಕೆಟ್‌ಬಾಲ್:ಫೈನಲ್‌ಗೆ ಬೀಗಲ್ಸ್

Published:
Updated:

ಬೆಂಗಳೂರು: ಹರಿಕೃಷ್ಣನ್ ಗಳಿಸಿದ 21 ಪಾಯಿಂಟ್‌ಗಳ ನೆರವಿನಿಂದ ಬೀಗಲ್ಸ್ ತಂಡದವರು ಇಲ್ಲಿ ನಡೆಯುತ್ತಿರುವ ರಾಜ್ಯ ಜೂನಿಯರ್ ಬ್ಯಾಸ್ಕೆಟ್‌ಬಾಲ್ ಚಾಂಪಿಯನ್‌ಷಿಪ್‌ನ ಬಾಲಕರ ವಿಭಾಗದ ಪಂದ್ಯದಲ್ಲಿ 72-52ಪಾಯಿಂಟ್‌ಗಳಿಂದ ಸ್ಪೋರ್ಟ್ಸ್ ಬ್ಲೂಸ್ ತಂಡವನ್ನು ಮಣಿಸಿ ಫೈನಲ್ ಪ್ರವೇಶಿಸಿದರು.

ಉತ್ತಮ ಆಟವಾಡಿದ ಬೀಗಲ್ಸ್ ತಂಡದ ಹರಿಕೃಷ್ಣನ್ 21 ಪಾಯಿಂಟ್ ಗಳಿಸಿದರೆ, ಯಶಸ್ 12 ಪಾಯಿಂಟ್ ಗಳಿಸಿದರು. ಸ್ಪೋರ್ಟ್ಸ್ ಬ್ಲೂಸ್ ತಂಡದ ವಿಶು 22 ಪಾಯಿಂಟ್ ಗಳಿಸಿ ಎಲ್ಲರ ಗಮನ ಸೆಳೆದರು.ನಗರದ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಇನ್ನೊಂದು ಸೆಮಿಫೈನಲ್ ಪಂದ್ಯದಲ್ಲಿ ಜೆಎಸ್‌ಸಿ ತಂಡ 50-47 ಪಾಯಿಂಟ್‌ಗಳಿಂದ ಯಂಗ್ ಒರಿಯನ್ಸ್ ತಂಡದ ಎದುರು ಗೆಲುವು ಪಡೆಯಿತು. ವಿಜಯಿ ತಂಡ ವಿರಾಮಕ್ಕೆ ಮುನ್ನ 23-21ಪಾಯಿಂಟ್‌ಗಳ ಮುನ್ನಡೆ ಹೊಂದಿತ್ತು. ವಿರಾಮದ ನಂತರ ಜೆಎಸ್‌ಸಿ ತಂಡ ಗೆಲುವಿನ ಅಂತರ ಹೆಚ್ಚಿಸಿಕೊಂಡಿತು.ಇದೇ ಚಾಂಪಿಯನ್‌ಷಿಪ್‌ನ ಬಾಲಕಿಯರ ವಿಭಾಗದ ಪಂದ್ಯಗಳಲ್ಲಿ ಸ್ಫೋರ್ಟ್ಸ್ ಹಾಸ್ಟೆಲ್ ತಂಡ 41-38ಪಾಯಿಂಟ್‌ಗಳಲ್ಲಿ ಬೀಗಲ್ಸ್ ತಂಡದ ಮೇಲೂ, ಜೆಎಸ್‌ಸಿ ತಂಡ 48-47ರಲ್ಲಿ ಮೌಂಟ್ಸ್ ತಂಡದ ಮೇಲೂ ಗೆಲುವು ಸಾಧಿಸಿತು.ಶುಕ್ರವಾರ ಸಂಜೆ ನಡೆದ ಬಾಲಕರ ವಿಭಾಗದ ಇನ್ನಿಷ್ಟು ಪಂದ್ಯಗಳಲ್ಲಿ ಬೀಗಲ್ಸ್ 54-40ರಲ್ಲಿ ಯಂಗ್ ಒರಿಯನ್ಸ್ ತಂಡದ ಮೇಲೂ, ಜೆಎಸ್‌ಸಿ 58-53ರಲ್ಲಿ ಸೌಥರ್ನ್ ಬ್ಲ್ಯೂಸ್ ವಿರುದ್ಧವೂ ಮೇಲೂ ಗೆಲುವು ಪಡೆದು ಮುಂದಿನ ಸುತ್ತಿಗೆ ಮುನ್ನಡೆಯಿತು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry