ಬ್ಯಾಸ್ಕೆಟ್‌ಬಾಲ್‌: ಕರ್ನಾಟಕದ ಮಹಿಳೆಯರಿಗೆ ಸೋಲು

6

ಬ್ಯಾಸ್ಕೆಟ್‌ಬಾಲ್‌: ಕರ್ನಾಟಕದ ಮಹಿಳೆಯರಿಗೆ ಸೋಲು

Published:
Updated:

ಅಹಮದಾಬಾದ್ (ಐಎಎನ್‌ಎಸ್): ಕರ್ನಾಟಕ ಮಹಿಳಾ ತಂಡ ಇಲ್ಲಿ ನಡೆಯುತ್ತಿರುವ 28 ನೇ ಫೆಡರೇಷನ್‌ ಕಪ್ ರಾಷ್ಟ್ರೀಯ ಬ್ಯಾಸ್ಕೆಟ್‌ಬಾಲ್ ಟೂರ್ನಿಯಲ್ಲಿ ನಿರಾಸೆ ಅನುಭವಿಸಿದೆ.ಸೋಮವಾರ ನಡೆದ ಪಂದ್ಯದಲ್ಲಿ ಕರ್ನಾಟಕ 77–49 ರಲ್ಲಿ ಪಂಜಾಬ್‌ ಎದುರು ಸೋಲು ಕಂಡಿತು.ತಂಡದ ಪರ ಸಿಂಧೂರಿ ಶಾಸ್ತ್ರಿ ಮತ್ತು ನವನೀತಾ ತಲಾ 12 ಹಾಗೂ ಅಮೃತಾ ಮಾನೆ 10 ಪಾಯಿಂಟ್‌ ಗಳಿಸಿದ ರಾದರೂ ತಂಡ ಸೋಲಿನಿಂದ ಪಾರಾಗಲಿಲ್ಲ.ಮಹಿಳಾ ವಿಭಾಗದ ಇತರ ಪಂದ್ಯಗಳಲ್ಲಿ ಕೇರಳ 77–20ರಲ್ಲಿ ಗುಜರಾತ್‌ ಮೇಲೂ, ಛತ್ತೀಸ್‌ಗಡ 85–44ರಲ್ಲಿ ದೆಹಲಿ ವಿರುದ್ಧವೂ ಗೆಲುವು ಸಾಧಿಸಿದವು.

ಸರ್ವೀಸಸ್‌ಗೆ ಜಯ: ಪುರುಷರ ವಿಭಾಗದ ಪಂದ್ಯದಲ್ಲಿ ಸರ್ವೀಸಸ್ ತಂಡ 89–42ರಲ್ಲಿ ರಾಜಸ್ತಾನವನ್ನು ಮಣಿಸಿತು. ಉಳಿದ ಪಂದ್ಯಗಳಲ್ಲಿ ಉತ್ತರಾಖಂಡ 66–34 ರಲ್ಲಿ ಛತ್ತೀಸ್‌ಗಡದ ಎದುರೂ, ಪಂಜಾಬ್‌ ತಂಡ 77–50ರಲ್ಲಿ ಕೇರಳದ ವಿರುದ್ಧವೂ ಜಯ ಪಡೆದು ಸಂಭ್ರಮಿಸಿದವು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry